ಅನಂತಾಡಿ-ನೆಟ್ಲಮುಡ್ನೂರು ಸಂಪರ್ಕದ ಕರಿಂಕ ದುರ್ಗಾ ಪರಮೇಶ್ವರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸಗೈದ ಶಾಸಕ ನಾಯಕ್ - Karavali Times ಅನಂತಾಡಿ-ನೆಟ್ಲಮುಡ್ನೂರು ಸಂಪರ್ಕದ ಕರಿಂಕ ದುರ್ಗಾ ಪರಮೇಶ್ವರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸಗೈದ ಶಾಸಕ ನಾಯಕ್ - Karavali Times

728x90

9 June 2026

ಅನಂತಾಡಿ-ನೆಟ್ಲಮುಡ್ನೂರು ಸಂಪರ್ಕದ ಕರಿಂಕ ದುರ್ಗಾ ಪರಮೇಶ್ವರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸಗೈದ ಶಾಸಕ ನಾಯಕ್

ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ಅನಂತಾಡಿ ಮತ್ತು ನೆಟ್ಲಮುಡ್ನೂರು ಎರಡೂ ಗ್ರಾಮವನ್ನು ಸಂಪರ್ಕಗೊಳಿಸುವ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ  ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿಸುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ವಿಶೇಷ 40 ಲಕ್ಷ ರೂಪಾಯಿ ಅನುದಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮವನ್ನು ಜೂನ್ 9 ರಂದು ಶಾಸಕ ಯು ರಾಜೇಶ್ ನಾಯಕ್ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅತ್ಯಂತ ಪುರಾತನ ಮತ್ತು ಬಹಳ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಮತ್ತು ಎರಡು ಗ್ರಾಮದ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಒಟ್ಟು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರಸ್ತೆಗೆ ಕಾಂಕ್ರೀಟಿಕರಣ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಮಂಡಲದ ಕ್ಷೇತ್ರ ಕಾರ್ಯದರ್ಶಿ ಸನತ್ ಕುಮಾರ್ ರೈ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ಕಾರ್ಯದರ್ಶಿ ನಾಗೇಶ್ ಭಂಡಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಸುರೇಶ್, ಉಪಾಧ್ಯಕ್ಷೆ ಸಂಧ್ಯಾ ವಿಶ್ವನಾಥ, ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರೇಂದ್ರ ರೈ ನೆಲ್ತೊಟ್ಟು, ಬಿಜೆಪಿ ಗ್ರಾಮ ಪ್ರಮುಖರಾದ ಮಹಾಬಲ ಪೂಜಾರಿ ಬಾಕಿಲ, ನವೀನ ಆಚಾರ್ಯ, ಶಿವರಾಮ್ ಶೆಟ್ಟಿ ಕರಿಂಕ, ಧನಂಜಯ ಗೌಡ ಮೀನಾವು, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಗೀತಾ ಚಂದ್ರಶೇಖರ್ ಗೋಳಿಕಟ್ಟೆ, ಬಿಜೆಪಿ ಪ್ರಮಖರಾದ ಜ್ಯೋತಿ ಹೆಗ್ಡೆ, ನವೀನ್ ಶೆಟ್ಟಿ, ಶಕೀಲ ಕೃಷ್ಣಪ್ಪ ಪೂಜಾರಿ, ಅಶೋಕ್ ರೈ ಎಲ್ಕಾಜೆ, ಬಾಲಕೃಷ್ಣ ನಾಯ್ಕ್, ಬಾಲಕೃಷ್ಣ ಪೂಜಾರಿ ಸಾಯಿ, ದಯಾನಂದ ಗೌಡ, ರಾಮಪ್ಪ ಗೌಡ, ಜಯರಾಮ್ ಆಚಾರಿ, ರಮೇಶ್ ಗೌಡ, ಕೃಷ್ಣಪ್ಪ ಗೌಡ, ಶಿವಾನಂದ ಶೆಟ್ಟಿ, ಕುಸುಮಧರ, ಧರ್ನಪ್ಪ ಗೌಡ, ಗಣೇಶಾನಂದ ಶೆಟ್ಟಿ, ಉದಯ ಗೌಡ ಕೊಂಕನೋಡಿ, ವಸಂತ್ ರಾಜ್ ಭಟ್, ಚೇತನ್ ರೈ, ಸ್ಥಳದಾನಿಗಳಾದ ರಾಧಾ ಕೃಷ್ಣ ಭಾಗವತ್, ಕೆ ಟಿ ಸುವರ್ಣ   ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅನಂತಾಡಿ-ನೆಟ್ಲಮುಡ್ನೂರು ಸಂಪರ್ಕದ ಕರಿಂಕ ದುರ್ಗಾ ಪರಮೇಶ್ವರಿ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸಗೈದ ಶಾಸಕ ನಾಯಕ್ Rating: 5 Reviewed By: karavali Times
Scroll to Top