ಬಂಟ್ವಾಳ, ಜೂನ್ 12, 2026 (ಕರಾವಳಿ ಟೈಮ್ಸ್) : 2026-27ನೇ ಸಾಲಿನ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರದಿಂದ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ.
ಬಿ ಸಿ ರೋಡು ಸಮೀಪದ ಪೆÇಸಳ್ಳಿಯಲ್ಲಿರುವ ಸಮುದಾಯ ಭವನದ ಮೇಲಂತಸ್ತಿನ ನಿರ್ಮಾಣಕ್ಕಾಗಿ ಅನುದಾನ ಒದಗಿಸುವಂತೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಅವರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ವಿಶೇಷ ಅನುದಾನ ಮಂಜೂರು ಮಾಡಿರುತ್ತದೆ. ಅನುದಾನ ಮಂಜೂರಿಗೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಫಾರಸು ಮೂಲಕ ನೆರವಾದ ಮಾಜಿ ಸಚಿವ ರಮಾನಾಥ ರೈ ಅವರಿಗೆ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಹಾಗೂ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಅನುದಾನ ಮಂಜೂರಾತಿಗೆ ಶಿಫಾರಸ್ಸು ಮಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಭೇಟಿಯಾದ ಕುಲಾಲ ಸಮುದಾಯದ ನಿಯೋಗ ಸನ್ಮಾನಿಸಿದರು. ಈ ಸಂದರ್ಭ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಸದಸ್ಯ ದೇವಪ್ಪ ಪಂಜಿಕಲ್ಲು, ಬುಡಾ ಸದಸ್ಯ ಮನೋಹರ ನೇರಂಬೋಳು, ಪುರಸಭಾ ಮಾಜಿ ಉಪಾಧ್ಯಕ್ಷ ಮೋಹನ್ ಬಿ, ಸಂಘದ ಮಾಜಿ ಅಧ್ಯಕ್ಷರಾದ ಸತೀಶ್ ಕುಲಾಲ್ ಪಾಪಿನಕೋಡಿ, ನಾರಾಯಣ ಸಿ ಪೆರ್ನೆ, ಭಾಸ್ಕರ ಕೊಳ್ನಾಡು ಮೊದಲಾದವರು ಇದ್ದರು.













0 comments:
Post a Comment