ಬಂಟ್ವಾಳ ಕುಲಾಲ ಸುಧಾಕರ ಸಂಘದ ಅಧ್ಯಕ್ಷರಾಗಿ ರಮೇಶ್ ಸಾಲಿಯಾನ್ ದ್ವಿತೀಯ ಬಾರಿಗೆ ಪುನರಾಯ್ಕೆ - Karavali Times ಬಂಟ್ವಾಳ ಕುಲಾಲ ಸುಧಾಕರ ಸಂಘದ ಅಧ್ಯಕ್ಷರಾಗಿ ರಮೇಶ್ ಸಾಲಿಯಾನ್ ದ್ವಿತೀಯ ಬಾರಿಗೆ ಪುನರಾಯ್ಕೆ - Karavali Times

728x90

15 June 2026

ಬಂಟ್ವಾಳ ಕುಲಾಲ ಸುಧಾಕರ ಸಂಘದ ಅಧ್ಯಕ್ಷರಾಗಿ ರಮೇಶ್ ಸಾಲಿಯಾನ್ ದ್ವಿತೀಯ ಬಾರಿಗೆ ಪುನರಾಯ್ಕೆ

ಬಂಟ್ವಾಳ, ಜೂನ್ 16, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ನೂತನ ಅಧ್ಯಕ್ಷರಾಗಿ ಬಿ ರಮೇಶ್ ಸಾಲಿಯಾನ್ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಸತೀಶ್ ಸಂಪಾಜೆ ಆಯ್ಕೆಯಾಗಿದ್ದಾರೆ.  

ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಪಾಧ್ಯಕ್ಷರಾಗಿ ಗಣೇಶ್ ಮರ್ದೋಳಿ, ಜತೆ ಕಾರ್ಯದರ್ಶಿಗಳಾಗಿ ಜಯಂತ್ ಬಂಗೇರ ವಗ್ಗ ಹಾಗೂ ಪ್ರೇಮಾ ಜನಾರ್ಧನ್ ಪೆÇಸಳ್ಳಿ, ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಆಶಾ ಗಿರಿಧರ್, ಸೇವಾ ದಳಪತಿಯಾಗಿ ಚಂದ್ರಶೇಖರ್, ಮಹಿಳಾ ಸಂಘದ ಅಧ್ಯಕ್ಷೆಯಾಗಿ ವಾರಿಜಾ ಚೇತನ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಚ್ಚೇಂದ್ರ ಸಾಲಿಯಾನ್, ಜಲಜಾಕ್ಷಿ ಕುಲಾಲ್, ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್, ಮಾಧವ ಕುಲಾಲ್ ಬಿ ಸಿ ರೋಡು, ಕವಿತಾ ಯಾದವ್, ಸುರೇಶ್ ಕುಲಾಲ್ ಬಂಟ್ವಾಳ ಅವರನ್ನು ನೇಮಕ ಮಾಡಲಾಯಿತು.

ಇದೇ ವೇಳೆ ಬಂಟ್ವಾಳ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರುಗೊಳಿಸುವಲ್ಲಿ ಶ್ರಮ ವಹಿಸಿದ ಕಟ್ಟಡ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಅವರನ್ನು ಅಭಿನಂದಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಕುಲಾಲ ಸುಧಾಕರ ಸಂಘದ ಅಧ್ಯಕ್ಷರಾಗಿ ರಮೇಶ್ ಸಾಲಿಯಾನ್ ದ್ವಿತೀಯ ಬಾರಿಗೆ ಪುನರಾಯ್ಕೆ Rating: 5 Reviewed By: karavali Times
Scroll to Top