ಎಂಎಲ್ಸಿ ಐವನ್ ಡಿಸೋಜ ಕಚೇರಿಯಲ್ಲಿ ಎಸ್.ಐ.ಆರ್. ಸಹಾಯವಾಣಿ ಕೇಂದ್ರ ಆರಂಭ - Karavali Times ಎಂಎಲ್ಸಿ ಐವನ್ ಡಿಸೋಜ ಕಚೇರಿಯಲ್ಲಿ ಎಸ್.ಐ.ಆರ್. ಸಹಾಯವಾಣಿ ಕೇಂದ್ರ ಆರಂಭ - Karavali Times

728x90

15 June 2026

ಎಂಎಲ್ಸಿ ಐವನ್ ಡಿಸೋಜ ಕಚೇರಿಯಲ್ಲಿ ಎಸ್.ಐ.ಆರ್. ಸಹಾಯವಾಣಿ ಕೇಂದ್ರ ಆರಂಭ

ಮಂಗಳೂರು, ಜೂನ್ 16, 2026 (ಕರಾವಳಿ ಟೈಮ್ಸ್) : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರ ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಶಾಸಕರ ಕಛೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ಸಹಾಯವಾಣಿ ಕೇಂದ್ರವನ್ನು ಜೂನ್ 15 ರಂದು ಆರಂಭಿಸಲಾಗಿದೆ. 

ಮಂಗಳೂರು ದಕ್ಷಿಣ ವಿಧಾನಸಭಾ ಕೇತ್ರಕ್ಕೆ ಸಂಬಂಧಪಟ್ಟಂತೆ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಪ್ಪಿಸಿಕೊಳ್ಳದಂತೆ, ಮತ್ತು ಸರಿಯಾದ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ನೀಡಿ ಖಾತ್ರಿಪಡಿಸಿಕೊಳ್ಳಲು ಸಹಾಯವಾಣಿ ಕೇಂದ್ರವು ಪ್ರಾರಂಭವಾಗಿದೆ. ಈ ಸಹಾಯವಾಣಿ ಮೊಬೈಲ್ ಸಂಖ್ಯೆ 8217865120ಗೆ ಸಂಪರ್ಕಿಸಿದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಲು ಸಹಾಯ ಮಾಡಲಾಗುವುದು ಎಂದು ಎಂಎಲ್ಸಿ ಐವನ್ ಡಿಸೋಜಾ ತಿಳಿಸಿದ್ದಾರೆ. 

ಇದೇ ವೇಳೆ ಮಾತನಾಡಿದ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಅನೇಕ ಕಡೆಗಳಲ್ಲಿ ಎಸ್ ಐ ಆರ್ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದ್ದು ಈ ರೀತಿ ಮಾಹಿತಿಯನುರ್ನೀಡಿದಲ್ಲಿ ಸಾರ್ವಜನಿಕರ ಗೊಂದಲಗಳು ದೂರವಾಗುವುದು ಹಾಗೂ ಈ ಸಹಾಯ ಕೇಂದ್ರದ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.

ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ನವೀನ್ ಡಿಸೋಜಾ, ಪದ್ಮನಾಭ ಪಣಿಕ್ಕರ್, ಪ್ರಕಾಶ್ ಬಿ ಸಾಲ್ಯಾನ್, ಸತೀಶ್ ಪೆಂಗಲ್, ಅಬ್ದುಲ್ ಸಲೀಂ, ಚೇತನ್ ಕುಮಾರ್, ಮನೀಷ್ ಬೋಳಾರ್, ಬಶೀರ್ ಅಹಮಮದ್ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಎಂಎಲ್ಸಿ ಐವನ್ ಡಿಸೋಜ ಕಚೇರಿಯಲ್ಲಿ ಎಸ್.ಐ.ಆರ್. ಸಹಾಯವಾಣಿ ಕೇಂದ್ರ ಆರಂಭ Rating: 5 Reviewed By: karavali Times
Scroll to Top