10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆಸಾಮಿ ಪೊಲೀಸ್ ಬಲೆಗೆ - Karavali Times 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆಸಾಮಿ ಪೊಲೀಸ್ ಬಲೆಗೆ - Karavali Times

728x90

25 June 2026

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆಸಾಮಿ ಪೊಲೀಸ್ ಬಲೆಗೆ

ಮಂಗಳೂರು, ಜೂನ್ 25, 2026 (ಕರಾವಳಿ ಟೈಮ್ಸ್) : ಸುಮಾರು 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎನ್ ಡಿ ಪಿ ಎಸ್ ಆರೋಪಿಯೋರ್ವನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಜೂನ್ 24 ರಂದು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಎಲ್ಲಂಜೆ ಗ್ರಾಮದ ಕುಂಟಾಲು ನಿವಾಸಿ ಉದಯ ಪೂಜಾರಿ ಅವರ ಪುತ್ರ ಪ್ರಸಾದ್ (33) ಎಂದು ಹೆಸರಿಸಲಾಗಿದೆ. 

ಮಂಗಳೂರು ಉತ್ತರ ಪೆÇಲೀಸ್ ಠಾಣೆಯ ಅಪರಾಧ ಸಂಖ್ಯೆ 289/2016, ಕಲಂ 379 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಸಾದ್ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣವನ್ನು ಎಲ್‍ಪಿಸಿ ಎಂದು ಪರಿಗಣಿಸಿತ್ತು. ಆರೋಪಿಯ ವಿರುದ್ಧ ಉಡುಪಿ, ಮೂಡಬಿದ್ರೆ ಹಾಗೂ ಮಣಿಪಾಲ ಪೆÇಲೀಸ್ ಠಾಣೆಗಳಲ್ಲಿಯೂ ಇತರೆ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಮಂಗಳೂರು ಉತ್ತರ ಪೆÇಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಜೂನ್ 24 ರಂದು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆಸಾಮಿ ಪೊಲೀಸ್ ಬಲೆಗೆ Rating: 5 Reviewed By: karavali Times
Scroll to Top