ಸಮಸ್ತ ಮುಶಾವರ ಸದಸ್ಯರೂ, ದ.ಕ. ಜಿಲ್ಲಾ ಖಾಝಿಯೂ ಆಗಿದ್ದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇನ್ನಿಲ್ಲ - Karavali Times ಸಮಸ್ತ ಮುಶಾವರ ಸದಸ್ಯರೂ, ದ.ಕ. ಜಿಲ್ಲಾ ಖಾಝಿಯೂ ಆಗಿದ್ದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇನ್ನಿಲ್ಲ - Karavali Times

728x90

22 June 2026

ಸಮಸ್ತ ಮುಶಾವರ ಸದಸ್ಯರೂ, ದ.ಕ. ಜಿಲ್ಲಾ ಖಾಝಿಯೂ ಆಗಿದ್ದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇನ್ನಿಲ್ಲ

ಮಂಗಳೂರು, ಜೂನ್ 23, 2026 (ಕರಾವಳಿ ಟೈಮ್ಸ್) : ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಪ್ರಸಿದ್ದ ಇಸ್ಲಾಮಿಕ್ ವಿದ್ವಾಂಸರೂ ಆಗಿದ್ದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ (78) ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 23 ರಂದು ಮಂಗಳವಾರ (ಮುಹರ್ರಂ 7) ಬೆಳಿಗ್ಗೆ ನಿಧನರಾಗಿದ್ದಾರೆ. 

ಕಳೆದ ಕೆಲವು ಸಮಯದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಖಾ ಉಸ್ತಾದ್, ದ.ಕ. ಮತ್ತು ಕೇರಳ ರಾಜ್ಯದ ಸುಮಾರು 200ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿದ್ದರು. ಸಮಸ್ತ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗ ಹಾಗೂ ಅಭಿಮಾನಿ ವರ್ಗವನ್ನು ಅಗಲಿದ್ದಾರೆ. ಉಸ್ತಾದರ ಜನಾಝವನ್ನು ಆಸ್ಪತ್ರೆಯಿಂದ ಬಂದರ್ ಝೀನತ್ ಭಕ್ಷ್ ಮಸೀದಿಗೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಸ್ನಾನ ಮಾಡಿಸಿ ಅಲ್ಲಿಂದ ಅವರ ಕಾಸರಗೋಡು ಮನೆಗೆ ಕೊಂಡೊಯ್ಯಲಾಗುವುದು. ಬಳಿಕ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ದಫನ ಕಾರ್ಯ ಎಲ್ಲಿ ನಡೆಸಲಾಗುವುದು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಮಸ್ತ ಮುಶಾವರ ಸದಸ್ಯರೂ, ದ.ಕ. ಜಿಲ್ಲಾ ಖಾಝಿಯೂ ಆಗಿದ್ದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಇನ್ನಿಲ್ಲ Rating: 5 Reviewed By: karavali Times
Scroll to Top