ಬಂಟ್ವಾಳ, ಜೂನ್ 08, 2026 (ಕರಾವಳಿ ಟೈಮ್ಸ್) : ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಡಿವೈಡರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು ಇತರ 8-9 ಮಂದಿ ಗಾಯಗೊಂಡ ಘಟನೆ ಪುದು ಗ್ರಾಮದ ಮಾರಿಪಳ್ಳ ಸಮೀಪದ 10ನೇ ಮೈಲಿಕಲ್ಲು ಎಂಬಲ್ಲಿ ಜೂನ್ 7 ರಂದು ಸಂಜೆ 4 ಗಂಟೆ ವೇಳೆ ಸಂಭವಿಸಿದೆ.
ಮೃತರನ್ನು ವಿಕಾಶ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮಂಗಳೂರು-ಕುತ್ತೆತ್ತೂರು ನಿವಾಸಿ ಉಪೇಂದ್ರ (45) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜೂನ್ 7 ರಂದು ಕಾರ್ಯಕ್ರಮದ ನಿಮಿತ್ತ ತನ್ನ ಸಂಬಂಧಿಕರೊಂದಿಗೆ ಮಿನಿ ಬಸ್ಸಿನಲ್ಲಿ ಬೆಳ್ತಂಗಡಿ ತಾಲೂಕು ಮಡಂತ್ಯಾರು ಎಂಬಲ್ಲಿಗೆ ಬಂದವರು ಕಾರ್ಯಕ್ರಮ ಮುಗಿಸಿ ವಾಪಾಸು ಹೊರಟು ಹೋಗುತ್ತಾ ಪುದು ಗ್ರಾಮದ 10ನೇ ಮೈಲಿಗಲ್ಲು ಬಳಿ ತಲುಪಿದಾಗ ಸಂಜೆ ಸಮಯ ಸುಮಾರು 4 ಗಂಟೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವು ರಸ್ತೆಯ ಬಳಿ ಮಿನಿ ಬಸ್ಸು ಚಾಲಕ ಪ್ರಶಾಂತ್ ಅವರ ನಿಯಂತ್ರಣ ಮೀರಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿ 8-9 ಜನರಿಗೆ ಕೈ-ಕಾಲುಗಳಿಗೆ, ಮೈಕೈಗೆ ಗಾಯಗಳಾಗಿದ್ದವರು ಮಂಗಳೂರು ಜನಪ್ರಿಯ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಪೈಕಿ ತೀವ್ರ ಗಾಯಗೊಂಡ ವಿಕಾಶ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸುಮಾರು 5.03 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ ಎಂದು ನೀಡಿರುವ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment