ಬಂಟ್ವಾಳ, ಜೂನ್ 08, 2026 (ಕರಾವಳಿ ಟೈಮ್ಸ್) : ಮಾನಸಿಕ ಹಾಗೂ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮ್ಮುಂಜೆ ಗ್ರಾಮದ ಕಲಾಯಿ ಮಂಜಲು ಎಂಬಲ್ಲಿ ಜೂನ್ 6 ರಂದು ಸಂಭವಿಸಿದೆ.
ಮೃತರನ್ನು ಇಲ್ಲಿನ ನಿವಾಸಿ ಸೇಸು ಪೂಜಾರಿ (77) ಎಂದು ಹೆಸರಿಸಲಾಗಿದೆ. ಇವರು ಕಳೆದ 15 ವರ್ಷಗಳಿಂದ ಮಾನಸಿಕ ಹಾಗೂ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದು, ಔಷಧಿ ಪಡೆಯುತ್ತಿದ್ದರು. ಇದರಿಂದ ಬೇಸರಗೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ಮನೆಯ ಹತ್ತಿರ ತೋಡಿನ ಬಳಿ ಇರುವ ಮರದ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಪುತ್ರ ಗಣೇಶ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment