ಉಡುಪಿ, ಜೂನ್ 21, 2026 (ಕರಾವಳಿ ಟೈಮ್ಸ್) : ತಾಲೂಕಿನ ಮಣಿಪುರ ರಹ್ಮಾನಿಯ್ಯಾ ಜುಮ್ಮಾ ಮಸೀದಿ ಅಧೀನದಲ್ಲಿರುವ ಖಲಂದರ್ ಷಾ ದಫ್ ಸಮಿತಿಯ ನೂತನ ಅಧ್ಯಕ್ಷರಾಗಿ ನಿಝಾಮುದ್ದೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್ ಹಮೀದ್ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಗೌರವಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಕುಂತಳನಗರ, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮಣಿಪುರ, ಜೊತೆ ಕಾರ್ಯದರ್ಶಿಯಾಗಿ ನಿಹಾಲ್ ಅಜೀದ್, ಕೋಶಾಧಿಕಾರಿಯಾಗಿ ಅಫ್ರೀದ್ ಅಯ್ಯೂಬ್, ದಫ್ ಉಸ್ತುವಾರಿಗಳಾಗಿ ರಶೀದ್ ಅಬ್ಬಾಸ್, ಸಲ್ಮಾನ್ ಹಮೀದ್, ಸೈಫುಲ್ಲಾ ಉಸ್ಮಾನ್, ಸಮಿತಿ ಸದಸ್ಯರುಗಳಾಗಿ ಅಫ್ರೀದ್ ಹಮೀದ್, ಫಾಯಿಝ್ ಅದ್ರಮಾನ್, ಅನ್ಸಿಲ್ ಅಯ್ಯೂಬ್, ಆದಿಲ್ ಆಸೀಫ್, ರಿಷಾನ್ ರಝಾಕ್, ಸಿನಾನ್ ರಝಾಕ್, ಇಮ್ರಾನ್ ಹಸನ್, ಮೊಹಿನುದ್ದೀನ್ ಹಮೀದ್ ಅವರನ್ನು ಆರಿಸಲಾಯಿತು.














0 comments:
Post a Comment