ಬಂಟ್ವಾಳ, ಜೂನ್ 21, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ) ಇದರ 2026-27ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಜೂನ್ 21 ರಂದು ಅಲೆತ್ತೂರು ಮಂಗಳಾ ಭವನದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ನೇಮಿರಾಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಪರಮೇಶ್ವರ ಶೆಟ್ಟಿ ಚಾವಡಿ ಮನೆ ಅಲೆತ್ತೂರು, ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ, ಹಿಮಕರ ಪೂಜಾರಿ, ನಾರಾಯಣ ಪೂಜಾರಿ ಸಭೆಯಲ್ಲಿ ಭಾಗವಹಿಸಿದ್ದರು.
ಉಪಾಧ್ಯಕ್ಷರಾಗಿ ನಾಗೇಶ್ ಕುಲಾಲ್, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರ, ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಯಶವಂತ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಪೂಜಾರಿ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ನಿತಿನ್ ಶೆಟ್ಟಿ, ಪ್ರಚಾರ ಸಮಿತಿ ಸದಸ್ಯರಾಗಿ ವಿಜಯ್ ಸುವರ್ಣ, ಶರಣ್ ಕುಲಾಲ್, ಧನರಾಜ್, ಸೃಜನ್, ಪ್ರಜ್ವಲ್, ಪ್ರಶಾಂತ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾಸ್ಕರ್ ಕುಲಾಲ್, ವಿಜಯ್ ಸುವರ್ಣ, ನಿತಿನ್ ಪೂಜಾರಿ, ಪ್ರಶಾಂತ್, ವಾಸುದೇವ ಅಲೆತ್ತೂರು, ವಿಶ್ವನಾಥ ಪೈ ಬಿ ಸಿ ರೋಡು, ದಿನೇಶ್ ಸುವರ್ಣ, ಉಮೇಶ್ ಬಂಗೇರ, ಸಂದೀಪ್ ಬಿ ಸಿ ರೋಡು ಅವರು ಆಯ್ಕೆಯಾದರು.













0 comments:
Post a Comment