ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಉಬ್ಬಿನಲ್ಲಿ ಹಿಡಿತ ತಪ್ಪಿ ಮಹಿಳೆ ಹಾಗೂ ಮಗು ಹೊರಕ್ಕೆಸೆಯಲ್ಪಟ್ಟು ಗಾಯಗೊಂಡ ಘಟನೆ ನರಿಕೊಂಬು ಗ್ರಾಮದ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿ ಮೇ 29 ರಂದು ರಾತ್ರಿ ವೇಳೆ ಸಂಭವಿಸಿದೆ.
ಗಾಯಗೊಂಡವರನ್ನು ಸಜಿಪಮುನ್ನೂರು ಗ್ರಾಮದ ನಿವಾಸಿ ಶ್ರೀಮತಿ ಸಫಿಯಾ ಹಾಗೂ ಅವರ ಮೊಮ್ಮಗಳಾದ ಫಾತಿಮತ್ ನಿಶಾ (4) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರಿ ಸಫನಾಝ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮೇ 29 ರಂದು ರಾತ್ರಿ ಕೆಎ70 9541 ನೋಂದಣಿ ಸಂಖ್ಯೆಯ ಮೊಹಮ್ಮದ್ ಅನ್ವರ್ ಅವರ ಅಟೋ ರಿಕ್ಷಾದಲ್ಲಿ ಸಜಿಪಮುನ್ನೂರು ಕಡೆಯಿಂದ ಮೆಲ್ಕಾರ್ ಮಾರ್ಗವಾಗಿ ಬಿ ಸಿ ರೋಡಿಗೆ ಸಂಚರಿಸುತ್ತಿದ್ದ ವೇಳೆ ನರಿಕೋಂಬು ಗ್ರಾಮದ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥನದ ಬಳಿ ಸರ್ವಿಸ್ ರಸ್ತೆಯಲ್ಲಿ ರಸ್ತೆಯ ಉಬ್ಬಿನಲ್ಲಿ ಶ್ರೀಮತಿ ಸಫಿಯ ಮತ್ತು ಪಾತಿಮತ್ ನಿಶಾ (4) ಎಂಬವರು ಅಟೋ ರಿಕ್ಷಾದಿಂದ ಹಿಡಿತ ತಪ್ಪಿ ರಸ್ತೆಗೆ ರಟ್ಟಿ ಬಿದ್ದು ಶ್ರೀಮತಿ ಸಫಿಯಾ ಅವರಿಗೆ ಎಡ ಕಾಲು ಮತ್ತು ಎಡ ಕೈ ಮೂಳೆ ಮುರಿತವಾಗಿದ್ದು, ಪಾತಿಮತ್ ನಿಶಾಗೆ ಹಣೆಗೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಅವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಫಾದರ್ ಮುಲ್ಲರ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment