ಸುರಿಬೈಲು : ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದಾತ ವಿಟ್ಲ ಪೊಲೀಸರ ವಶಕ್ಕೆ - Karavali Times ಸುರಿಬೈಲು : ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದಾತ ವಿಟ್ಲ ಪೊಲೀಸರ ವಶಕ್ಕೆ - Karavali Times

728x90

1 June 2026

ಸುರಿಬೈಲು : ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದಾತ ವಿಟ್ಲ ಪೊಲೀಸರ ವಶಕ್ಕೆ

ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬೋಳಂತೂರು ಗ್ರಾಮದ ಸುರಿಬೈಲು ಎಂಬಲ್ಲಿ ಮೇ 28 ರಂದು ರಾತ್ರಿ ನಡೆದಿದೆ. 

ಬಂಧಿತ ಆರೋಪಿಯನ್ನು ಸಜಿಪನಡು ನಿವಾಸಿ ಮಯ್ಯದ್ದಿ (23) ಎಂದು ಹೆಸೆರಿಸಲಾಗಿದೆ. ಮೇ 28 ರಂದು ಬೋಳಂತೂರು ಗ್ರಾಮದ ಸುರಿಬೈಲು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರಿಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡು ಬಂದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವೆನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಈತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುರಿಬೈಲು : ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದಾತ ವಿಟ್ಲ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top