ಬಂಟ್ವಾಳದ ವಿವಿಧೆಡೆ ಮಳೆ ಹಾನಿ ಪ್ರಕರಣಗಳು : ಭಾರೀ ನಷ್ಟ - Karavali Times ಬಂಟ್ವಾಳದ ವಿವಿಧೆಡೆ ಮಳೆ ಹಾನಿ ಪ್ರಕರಣಗಳು : ಭಾರೀ ನಷ್ಟ - Karavali Times

728x90

10 June 2026

ಬಂಟ್ವಾಳದ ವಿವಿಧೆಡೆ ಮಳೆ ಹಾನಿ ಪ್ರಕರಣಗಳು : ಭಾರೀ ನಷ್ಟ

 ಬಂಟ್ವಾಳ, ಜೂನ್ 10, 2026 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಮಳೆಯಿಂದಾಗಿ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ಆವರಣ ಗೋಡೆ ಕುಸಿದು ಶ್ರೀಮತಿ ನೆಬಿಸಾ ಕೋಂ ಹಂಝ ಅವರ ವಾಸದ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಹಾನಿಯಾಗಿರುತ್ತದೆ. ಬಿ ಮೂಡ ಗ್ರಾಮದ ಮೊಡಂಕಾಪು ನಿವಾಸಿ ಸ್ಟೇನಿ ಜೋನ್ ಸೆರಾವೋ ಬಿನ್ ಜೋನ್ ಸೆರಾವೋ ಅವರ ಆವರಣ ಗೋಡೆಯು ಕುಸಿದು ಬಿದ್ದ ಪರಿಣಾಮ ನೀರು ಹೋಗುವ ತೋಡು ಮುಚ್ಚಿ ಹೋಗಿದ್ದು, ಪಕ್ಕದಲ್ಲಿರುವ ಶ್ರೀ ವನದುರ್ಗಾ ತಥಾ ಜಲಾಂತರ್ಗಾತ ನಾಗ ಸಾನಿಧ್ಯ ದೇವಸ್ಥಾನದ ಆವರಣ ಗೋಡೆಗೂ ಹಾನಿಯಾಗಿ ಆವರಣ ಗೋಡೆ ಬಿದ್ದಿದೆಯಲ್ಲದೆ ನಾಗಬನಕ್ಕೂ ಹಾನಿಯಾಗಿದೆ.

ವಿಟ್ಲ ಕಸಬಾ ಗ್ರಾಮದ ನೀರಕಣಿ ನಿವಾಸಿ ರಹಿಮತ್ ಕೋಂ ಅಬ್ದುಲ್ ಹಮೀದ್ ಅವರ ಮನೆ ಹಿಂಭಾಗ ಕಲ್ಲಿನ ಆವರಣ ಗೋಡೆ/ ತಡೆಗೋಡೆ ಭಾಗಶಃ ಕುಸಿದಿರುತ್ತದೆ. ವಾಸ್ತವ್ಯದ ಮನೆಗೆ ಯಾವುದೇ ಹಾನಿ ಆಗಿರುವುದಿಲ್ಲ.

ಕಾವಳಮೂಡೂರು ಗ್ರಾಮದ, ಕರಿಂಜಾ ನಿವಾಸಿ ಗಿರಿಜಾ ಕೋಂ ತನಿಯ ದರ್ಕಾಸು ಮನೆ ಎಂಬವರ ಮನೆ ಮೇಲೆ ಅಡಿಕೆ ಮರ ಮುರಿದು ಬಿದ್ದಿದ್ದು, ಮನೆಯ ಮುಂಭಾಗದ ಶೀಟ್ ಮುರಿದು ಹೋಗಿರುತ್ತದೆ. ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದ ವಿವಿಧೆಡೆ ಮಳೆ ಹಾನಿ ಪ್ರಕರಣಗಳು : ಭಾರೀ ನಷ್ಟ Rating: 5 Reviewed By: karavali Times
Scroll to Top