ಬೆಂಗಳೂರು, ಜೂನ್ 07, 2026 (ಕರಾವಳಿ ಟೈಮ್ಸ್) : ನೂತನ ಸಿಎಂ ಅವರ ಸೂಚನೆಯಂತೆ ರಾಜ್ಯದಲ್ಲಿ ಹೊಸದಾಗಿ ರೌಡಿ ನಿಗ್ರಹ ಪಡೆ ರಚನೆ ಮಾಡಿ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಪ್ರತಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಸರ್ಕಲ್ ಇನ್ಸ್ ಪೆಕ್ಟರ್‍ಗಳ ಉಸ್ತುವಾರಿಯಲ್ಲಿ ರೌಡಿ ನಿಗ್ರಹ ಪಡೆಗಳ ರಚನೆ ಮಾಡಿ ಆದೇಶಿಸಿದ್ದಾರೆ.
ನೂತನ ಸಿಎಂ ಡಿ.ಕೆ. ಶಿವಕುಮಾರ್ ಮೊದಲ ಪತ್ರಿಕಾಗೋಷ್ಠಿಯಲ್ಲಿ ರೌಡಿಗಳನ್ನು ಹಾಗೂ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ರೌಡಿ ನಿಗ್ರಹ ದಳ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆಯ ಮೇರೆಗೆ ರೌಡಿ ನಿಗ್ರಹ ಪಡೆ ರಚಿಸಿ ಆದೇಶಿಸಲಾಗಿದೆ.
ನೂತನವಾಗಿ ರಚನೆಯಾಗುವ ರೌಡಿ ನಿಗ್ರಹ ದಳಕ್ಕೆ ಕೆಲವೊಂದು ಸೂಚನೆ ನೀಡಲಾಗಿದೆ. ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಪರಿಶೀಲನೆ ನಡೆಸಬೇಕು. ಪದೇ ಪದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಹೊಸ ರೌಡಿಶೀಟ್ ಗಳನ್ನು ತೆರೆಯಬೇಕು. ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳ ಮಾಹಿತಿ ಸಂಗ್ರಹವಾಗಿರಬೇಕು. ರೌಡಿಶೀಟರ್ ಗಳ ಚಟುವಟಿಕೆಗಳು, ಚಲನವಲನಗಳ ಮೇಲೆ ಕಣ್ಗಾವಲು ಇಟ್ಟಿರಬೇಕು. ಅಕ್ಟಿವ್ ರೌಡಿಗಳು, ಅಪರಾಧ ಚಟುವಟಿಯಲ್ಲಿ ಭಾಗಿಯಾಗುವ ಗ್ಯಾಂಗ್ ಗಳ ಹಿನ್ನೆಲೆ, ಚಲನವಲನದ ಮೇಲೆ ನಿಗಾ ಇಟ್ಟಿರಬೇಕು. ನಿರಂತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರ ವಿರುದ್ಧ ಗೂಂಡಾ ಕಾಯ್ದೆ, ಕೋಕಾ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಬೇಕು. ರೌಡಿಗಳ ವಿರುದ್ಧ ವಾರೆಂಟ್‍ಗಳು, ಬಾಂಡ್‍ಗಳು ಮತ್ತು ಇತರ ಕಾನೂನು ಪ್ರಕ್ರಿಯೆಗಳ ಪರಿಣಾಮಕಾರಿ ಜಾರಿಯನ್ನು ಖಚಿತಪಡಿಸಿಕೊಳ್ಳಬೇಕು. ಬೀಟ್ ಪೆÇಲೀಸರು ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು. ದುರ್ಬಲ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಗಳು ಮತ್ತು ಆಕಸ್ಮಿಕ ತಪಾಸಣೆಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.













0 comments:
Post a Comment