ಬಂಟ್ವಾಳದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಆರಂಭ : ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಮೊದಲ ಎನಿಮೇಷನ್ ಫಾರ್ಮ್ ವಿತರಣೆ - Karavali Times ಬಂಟ್ವಾಳದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಆರಂಭ : ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಮೊದಲ ಎನಿಮೇಷನ್ ಫಾರ್ಮ್ ವಿತರಣೆ - Karavali Times

728x90

30 June 2026

ಬಂಟ್ವಾಳದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಆರಂಭ : ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಮೊದಲ ಎನಿಮೇಷನ್ ಫಾರ್ಮ್ ವಿತರಣೆ

ಬಂಟ್ವಾಳ, ಜೂನ್ 30, 2026 (ಕರಾವಳಿ ಟೈಮ್ಸ್) : ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ಜೂನ್ 30 ರಂದು ಪ್ರಾರಂಭಗೊಂಡಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 130 ರ ಬಿ ಮೂಡ ಗ್ರಾಮದ ಬಸ್ತಿಪಡ್ಪು ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯ ಇರುವ ಕೇಂದ್ರದ ಮಾಜಿ ಹಣಕಾಸು ಮಂತ್ರಿ ಬಿ ಜನಾರ್ದನ ಪೂಜಾರಿ ಅವರ ನಿವಾಸದಲ್ಲಿ ಪ್ರಥಮ ಎನಿಮೇಷನ್ ಫಾರ್ಮ್ ವಿತರಿಸಲಾಯಿತು. ಸದ್ರಿ ಸಮೀಕ್ಷೆ ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಮಂಜುನಾಥ, ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು,  ಬಿ ಎಲ್ ಎ  ಸುನೀಲ್ ಕುಮಾರ್ ಭಂಡಾರಿಬೆಟ್ಟು, ಮೇಲ್ವಿಚಾರಕರಾದ ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಮತಗಟ್ಟೆ ಅಧಿಕಾರಿ ದಾಮೋದರ ಪಡಿಯಾರ್, ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಆರಂಭ : ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆಗೆ ಮೊದಲ ಎನಿಮೇಷನ್ ಫಾರ್ಮ್ ವಿತರಣೆ Rating: 5 Reviewed By: karavali Times
Scroll to Top