ಬಂಟ್ವಾಳ, ಜೂನ್ 07, 2026 (ಕರಾವಳಿ ಟೈಮ್ಸ್) : ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿಧಾನಸಭಾ ಸ್ಪೀಕರ್ ಆಗಿದ್ದು, ಜೂನ್ 3 ರಂದು ರಾಜ್ಯ ಆರೋಗ್ಯ ಸಚಿವರಾಗಿ ಪ್ರಮಾಣ ಮಾಡಿದ ಬಳಿಕ ಮೊದಲ ಬಾರಿಗೆ ಭಾನುವಾರ ತವರು ಜಿಲ್ಲೆಗೆ ಆಗಮಿಸಿದ ಡಾ ಯು ಟಿ ಖಾದರ್ ಫರೀದ್ ಅವರು ಭಾನುವಾರ ಸಂಜೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ಕಳ್ಳಿಗೆ ನಿವಾಸಕ್ಕೆ ಭೇಟಿ ನೀಡಿದರು.
ಸಚಿವ ಖಾದರ್ ಅವರನ್ನು ರಮಾನಾಥ ರೈ ಹಾಗೂ ಪತ್ನಿ ಧನಭಾಗ್ಯ ಆರ್ ರೈ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಶಾಲು ಹೊದಿಸಿ ಸನ್ಮಾ£ಸಿದರು. ಭೇಟಿ ವೇಳೆ ಉಭಯ ನಾಯಕರು ರಾಜಕೀಯ ಸಹಿತ ಹಲವು ವಿಷಯಗಳ ಬಗ್ಗೆ ಒಂದಷ್ಟು ಸಮಯ ಚರ್ಚಿಸಿದರು. ಈ ವೇಳೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
















0 comments:
Post a Comment