ಮಂಗಳೂರು, ಜೂನ್ 06, 2026 (ಕರಾವಳಿ ಟೈಮ್ಸ್) : 2025 ರ ಜನವರಿ 17 ರಂದು ಕೆ.ಸಿ.ರೋಡಿನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ ಬ್ಯಾಂಕಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ಬಂಧಿತ ಆರೋಪಿಯನ್ನು ಮೂಲತಃ ಉತ್ತರ ಪ್ರದೇಶ ನಿವಾಸಿ, ಪ್ರಸ್ತುತ ಗುಜರಾತಿನ ಸೂರತಿನಲ್ಲಿ ವಾಸವಾಗಿರುವ ದಿವಂಗತ ಬೀರೇಂದ್ರ ಸಿಂಗ್ ಎಂಬವರ ಪುತ್ರ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಅಲಿಯಾಸ್ ಧರ್ಮವೀರ್ ಸಿಂಗ್ ಅಲಿಯಾಸ್ ಮನೋಜ್ ಜೀತ್ ಲಾಲ್ ವರ್ಮ ಅಲಿಯಾಸ್ ಧರ್ಮ್ ಅಲಿಯಾಸ್ ಮಾಸ್ಟರ್ ಅಲಿಯಾಸ್ ಕಳ್ಳು (34) ಎಂದು ಹೆಸರಿಸಲಾಗಿದೆ.
ಈತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಂಡವು ಖಚಿತ ಮಾಹಿತಿಯಂತೆ ಮೇ 11 ರಂದು ಮಹಾರಾಷ್ಟ್ರ ರಾಜ್ಯದ ಮುಂಬೈಯ ಪನ್ವೇಲಿ ರೈಲ್ವೆ ಸ್ಟೇಷನ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು, ಮೇ 12 ರಂದು ಉಳ್ಳಾಲ ಪೆÇಲಿಸ್ ಠಾಣೆಗೆ ಕರೆದುಕಂಡು ಬಂದು, ನ್ಯಾಯಾಲಯಕ್ಕೆ ಹಾಜರು ಪಡಿಸಸಲಾಗಿರುತ್ತದೆ. ನಂತರ ಸದ್ರಿ ಆರೋಪಿಯನ್ನು 10 ದಿನಗಳ ಕಾಲ ಪೆÇಲೀಸ್ ಕಸ್ಟಡಿಗೆ ಪಡೆದುಕೊಂಡು ಮುಂದಿನ ತನಿಖೆ ಮೇ 22 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.













0 comments:
Post a Comment