ಬಂಟ್ವಾಳ, ಜೂನ್ 04, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರು ಶಾಸಕರ ಅನುದಾನದಲ್ಲಿ ಕೈಯೂರು ಅಂಗನವಾಡಿ ಕಟ್ಟಡ ಮತ್ತು ಸಂಪರ್ಕ ರಸ್ತೆ ಒಟ್ಟು 16 ಲಕ್ಷ ರೂಪಾಯಿ, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಅವರ 5 ಲಕ್ಷ ರೂಪಾಯಿ ಅನುದಾನದ ಕೆಯ್ಯೂರು ಸ್ಥಾನಮೂಲೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳನ್ನು ಉದ್ಘಾಟಿಸಿದರು.
ಮಂಚಿ ಗ್ರಾಮದಲ್ಲಿ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 8.50 ಕೋಟಿ ರೂಪಾಯಿ ಅನುದಾನದಲ್ಲಿ ಬಹುತೇಕ ಕಾಮಗಾರಿಗಳು ನಡೆದಿದ್ದು, ಬಾಕಿ ಉಳಿದ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳು ಈಗ ನಡೆದು ಉದ್ಘಾಟನೆಗೊಳ್ಳುತ್ತಿದೆ ಎಂದವರು ಹೇಳಿದರು.
ಈ ಸಂದರ್ಭ ಸಿಡಿಪಿಒ ಮುಮ್ತಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಾಲಾ, ಅಂಗನವಾಡಿ ಶಿಕ್ಷಕಿ ಚಂದ್ರಿಕಾ, ಅಂಗನವಾಡಿ ಸಹಾಯಕಿ ಪೂರ್ಣಿಮಾ, ಪ್ರಮುಖರಾದ ಮೋಹನ್ ದಾಸ್ ಶೆಟ್ಟಿ, ಮೋಹನ್ ಪ್ರಭು ಕೆ, ಶ್ರೀಮತಿ ಪ್ರಮೀಳ, ಶ್ರೀಮತಿ ಉಷಾ ಶೆಟ್ಟಿ, ಕೇಶವ ರಾವ್, ಪ್ರಭಾಕರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
















0 comments:
Post a Comment