ಬಂಟ್ವಾಳ, ಜೂನ್ 04, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ 46ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ಪೆÇಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಬಿ ರಮೇಶ್ ಸಾಲಿಯಾನ್ ಸಂಚಯಗಿರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜ ಬಾಂಧವರಿಗೆ ಸನ್ಮಾನ ಹಾಗೂ ಗೌರವ ಸಲ್ಲಿಸಲಾಯಿತು. ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ ಎಂ ಪಿ ವರ್ಷ ಮೈಸೂರು, ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು, ನಿವೃತ್ತ ಡೆಪ್ಯೂಟಿ ಬಿ ಎಸ್ ಎಫ್ ಕಮಾಂಡೆಂಟ್ ಡಿ ಚಂದಪ್ಪ ಮೂಲ್ಯ, ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ಕುಲಾಲ ಯುವವೇದಿಕೆ ಅಧ್ಯಕ್ಷ ಸುಮಿತ್ ಸೊರ್ನಾಡು ಹಾಗೂ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭೋಜ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದ ಕು ಜ್ಞಾನಶ್ರೀ ಅರಳ ಹಾಗೂ ಕು ಮನ್ವಿತಾ, ರಾಷ್ಟ್ರ ಮಟ್ಟದ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ 10ನೇ ಸ್ಥಾನ ಪಡೆದ ಕು ಕೃತಿ ಎನ್ ಬಿ ಪಿ ಹಾಗೂ ಕರಾಟೆಯಲ್ಲಿ ರಾಜ್ಯ ಮಟ್ಟದ ಪ್ರಥಮ ಸ್ಥಾನ ಗಳಿಸಿದ ಕು ಸಾನ್ವಿ ಕೆ ಅವರನ್ನು ಅಭಿನಂದಿಸಲಾಯಿತು.
ಡಾಕ್ಟರೇಟ್ ಪದವೀಧರೆ ಡಾ ಬಬಿತಾ ಗಣೇಶ್, ಚಿತ್ರಕಲಾವಿದೆ ಸುಕನ್ಯಾ ಸೌತೆಬಳ್ಳಿ ಮತ್ತು ಟೇಬಲ್ ಟೆನ್ನಿಸ್‍ನಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದ ಸುಶ್ಮಿತಾ ಸೋಮನಾಥ್ ಅವರನ್ನು ಗೌರವಿಸಲಾಯಿತು. ಸಹಕಾರ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು ಅವರಿಗೆ ‘ಅಮೂಲ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಪ್ರೇಮನಾಥ ನೇರಂಬೋಳು, ಕೃತಿಕ್ ಕುಮಾರ್ ವೈ ಎಸ್ ಹಾಗೂ ವೈಷ್ಣವಿ ವೈ ಕೆ ಅವರಿಂದ ಗಾನ ಸಂಭ್ರಮ ನಡೆಯಿತು. ಕಟೀಲು ಮೇಳದ ಕಲಾವಿದ ಅಶ್ವಥ್ ಕುಲಾಲ್ ಮಂಜನಾಡಿ ನೇತೃತ್ವದಲ್ಲಿ ಸಮಾಜ ಬಾಂಧವರಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ್, ಸೇವಾದಳಪತಿ ಜಯಂತ ಕುಲಾಲ್ ಅಗ್ರಬೈಲು ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಸ್ವಾಗತಿಸಿ, ಮಹೇಶ್ ಕುಲಾಲ್ ಕಡೇಶಿವಾಲಯ ಕಾರ್ಯಕ್ರಮ ನಿರೂಪಿಸಿದರು. ತಾರನಾಥ ಮೊಡಂಕಾಪು, ಹರಿಣಾಕ್ಷಿ ಮೊಡಂಕಾಪು ಹಾಗೂ ರಾಜೇಶ್ ಕುಮಾರ್ ರೈ ನಿರ್ವಹಿಸಿದರು.











0 comments:
Post a Comment