ಈಚರ್ ಲಾರಿಯಲ್ಲಿ 16 ಜಾನುವಾರು ಅಕ್ರಮ ಸಾಗಾಟ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು : ಇಬ್ಬರು ಆರೋಪಿಗಳು ಅರೆಸ್ಟ್ - Karavali Times ಈಚರ್ ಲಾರಿಯಲ್ಲಿ 16 ಜಾನುವಾರು ಅಕ್ರಮ ಸಾಗಾಟ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು : ಇಬ್ಬರು ಆರೋಪಿಗಳು ಅರೆಸ್ಟ್ - Karavali Times

728x90

20 June 2026

ಈಚರ್ ಲಾರಿಯಲ್ಲಿ 16 ಜಾನುವಾರು ಅಕ್ರಮ ಸಾಗಾಟ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು : ಇಬ್ಬರು ಆರೋಪಿಗಳು ಅರೆಸ್ಟ್

ಉಪ್ಪಿನಂಗಡಿ, ಜೂನ್ 20, 2026 (ಕರಾವಳಿ ಟೈಮ್ಸ್) : ಈಚರ್ ಲಾರಿಯಲ್ಲಿ ಅಕ್ರಮವಾಗಿ 16 ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಉಪ್ಪಿನಂಗಡಿ-ಆನೆಬೈಲು ಎಂಬಲ್ಲಿ ಜೂನ್ 17 ರಂದು ಬೆಳಿಗ್ಗೆ ನಡೆದಿದೆ. ಬಂಧಿತ ಆರೋಪಿಗಳನ್ನು ಕಡೂರು ನಿವಾಸಿ ಪರ್ದೀನ್ ಖಾನ್ (24) ಹಾಗೂ ಹಾಸನ ಹೊಳೆನರಸೀಪುರ ನಿವಾಸಿ ಜಾವೀದ್ ಪಾಷಾ (34) ಎಂದು ಹೆಸರಿಸಲಾಗಿದೆ. 

ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಸುತೇಶ್ ಕೆಪಿ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ನಡೆಸುತ್ತಿದ್ದ 16 ಜಾನುವಾರುಗಳ ಸಹಿತ ಈಚರ್ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಈಚರ್ ಲಾರಿಯಲ್ಲಿ 16 ಜಾನುವಾರು ಅಕ್ರಮ ಸಾಗಾಟ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು : ಇಬ್ಬರು ಆರೋಪಿಗಳು ಅರೆಸ್ಟ್ Rating: 5 Reviewed By: karavali Times
Scroll to Top