ಬಂಟ್ವಾಳ, ಜುಲೈ 24, 2026 (ಕರಾವಳಿ ಟೈಮ್ಸ್) : ಪ್ರಶಸ್ತಿ, ಹೆಸರು, ಪ್ರತಿಷ್ಠೆಗಾಗಿ ಕೆಲಸ ಮಾಡದೆ ಅರ್ಹ ಫಲಾನುಭವಿಗಳಿಗೆ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಾಮಾಜಿಕ ಸೇವೆಯನ್ನು ಮಾಡುವುದಾಗಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ನೂತನ ಅಧ್ಯಕ್ಷ, ಉದ್ಯಮಿ ಹಾಜಿ ಹಂಝ ಬಸ್ತಿಕೋಡಿ ಹೇಳಿದ್ದಾರೆ.
ರೋಟರಿ ಬಂಟ್ವಾಳ ಟೌನ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವರು ಸಂಸ್ಥೆಯು ದಶಮಾನೋತ್ಸವ ಆಚರಿಸುತ್ತಿರುವ ವರ್ಷದಲ್ಲೇ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಅತ್ಯಂತ ಸಂತಸ ತಂದಿದೆ. ಸಾಮಾಜಿಕ ಸೇವಾ ಸಂಸ್ಥೆಯ ಅತ್ಯುತ್ತಮ ವರ್ಷದಲ್ಲಿ ಚುಕ್ಕಾಣಿ ಹಿಡಿದಿರುವುದು ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ನನ್ನ ಮೇಲೆ ವಿಶ್ವಾಸ ಇಟ್ಟು ಆಯ್ಕೆ ಮಾಡಿದ ಎಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದವರು ಹೇಳಿದರು.
ಅಧ್ಯಕ್ಷರ ಜೊತೆಗೆ ಕಾರ್ಯದರ್ಶಿಯಾಗಿ ಮನೋಜ್ ಕನಪಾಡಿ, ಕೋಶಾಧಿಕಾರಿಯಾಗಿ ಕಿಶೋರ್ ಸಹಿತ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪೂರ್ವ ಜಿಲ್ಲಾ ಗವರ್ನರ್ ಎಚ್ ಆರ್ ಕೇಶವ ಅವರು ಪದಗ್ರಹಣ ನೆರವೇರಿಸಿಕೊಟ್ಟರು.
ನಿರ್ಗಮನ ಅಧ್ಯಕ್ಷ ವಚನ್ ಶೆಟ್ಟಿ, ಕಾರ್ಯದರ್ಶಿ ನಾಗೇಶ್ ಎಂ, ನಿಕಟಪೂರ್ವ ವಲಯ ಸೇನಾನಿ ಸುರೇಶ್ ಸಾಲ್ಯಾನ್, ನಿಕಟಪೂರ್ವ ಸಹಾಯಕ ಗವರ್ನರ್ ಜಯಕುಮಾರ್ ಶೆಟ್ಟಿ, ಸಹಾಯಕ ಗವರ್ನರ್ ಶನ್ಫತ್ ಶರೀಫ್, ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ಝೋನಲ್ ಲೆಫ್ಟಿನೆಂಟ್ ಅನುರಾಧಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಸದಸ್ಯ ಲೋಕೇಶ್ ಸುವರ್ಣ, ಆನ್ಸ್ ಕ್ಲಬ್ ಅಧ್ಯಕ್ಷೆ ರಶ್ಮಿ ಶೆಟ್ಟಿ ಹಾಗೂ ಸಮತಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.















0 comments:
Post a Comment