ಮಂಗಳೂರು, ಜುಲೈ 07, 2026 (ಕರಾವಳಿ ಟೈಮ್ಸ್) : ದೇಶದ ಖ್ಯಾತ ತೂಗು ಸೇತುವೆ ತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತರು ಗಿರೀಶ್ ಭಾರಧ್ವಾಜ್ ಅವರ ನಿಧನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಸಂತಾಪ ಸೂಚಿಸಿದ್ದಾರೆ.
ಗಿರೀಶ್ ಭಾರಧ್ವಾಜ್ ಅವರು ತಮ್ಮ ವಿಶಿಷ್ಟ ತಾಂತ್ರಿಕ ಪರಿಣತಿ ಮತ್ತು ಸಮರ್ಪಿತ ಸೇವೆಯಿಂದ ದೇಶದಾದ್ಯಂತ ಅನೇಕ ತೂಗು ಸೇತುವೆಗಳ ನಿರ್ಮಾಣದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ವಿಶೇಷವಾಗಿ ದ್ವೀಪ ಪ್ರದೇಶದ ಜನರಿಗೆ ದೈನಂದಿನ ಜೀವನ ನಡೆಸಲು ಸಂಪರ್ಕ ಕಲ್ಪಿಸಿದ ಅನೇಕ ಸೇತುವೆಗಳು ಅವರ ಸೇವೆಯ ಸಾಕ್ಷಿಯಾಗಿವೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ.
ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಉಳಿಯ ಪ್ರದೇಶದಲ್ಲಿ ನಿರ್ಮಾಣವಾಗುವ ತೂಗು ಸೇತುವೆ ಕುರಿತು ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಕ್ಷಣಗಳು ನೆನಪಾಗುತ್ತಿವೆ. ಅವರ ಮಗ ಕೂಡ ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವುದು ಹೆಮ್ಮೆಕರ ಸಂಗತಿ ಎಂದು ಹೇಳಿದ್ದಾರೆ.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಸಂತಾಪ
ಗ್ರಾಮೀಣ ಪ್ರದೇಶಗಳನ್ನು ಕಡಿಮೆ ವೆಚ್ಚದ ತೂಗು ಸೇತುವೆಗಳ ಮೂಲಕ ಸಂಪರ್ಕಿಸಿ ಸಾವಿರಾರು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದ್ದ ಪದ್ಮಶ್ರೀ ಪುರಸ್ಕøತ ಡಾ. ಗಿರೀಶ್ ಭಾರದ್ವಾಜ್ ಅವರು ಅಗಲಿದ್ದು, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಸಂತಾಪ ಸೂಚಿಸಿದ್ದಾರೆ.
ಗ್ರಾಮೀಣ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಗೆ ಅವರು ನೀಡಿದ ಅಪಾರ ಕೊಡುಗೆ ಹಾಗೂ ಸಮಾಜದ ಬಡ ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ತೋರಿದ ಬದ್ಧತೆ ಸದಾ ಸ್ಮರಣೀಯ. ಡಾ. ಗಿರೀಶ್ ಭಾರದ್ವಾಜ್ ಅವರು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೂಗು ಸೇತುವೆಗಳ ನಿರ್ಮಾಣ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯೊಂದಿಗೆ ನಿಕಟವಾಗಿ ಕಾರ್ಯ£ರ್ವಹಿಸಿದ್ದರು ಎಂದವರು ನೆನಪಿಸಿದ್ದಾರೆ.

















0 comments:
Post a Comment