ಪುದು : ಬೈಕ್ ಉರುಳಿ ಬಿದ್ದು ಸವಾರ ಆಸ್ಪತ್ರೆಗೆ - Karavali Times ಪುದು : ಬೈಕ್ ಉರುಳಿ ಬಿದ್ದು ಸವಾರ ಆಸ್ಪತ್ರೆಗೆ - Karavali Times

728x90

13 July 2026

ಪುದು : ಬೈಕ್ ಉರುಳಿ ಬಿದ್ದು ಸವಾರ ಆಸ್ಪತ್ರೆಗೆ

ಬಂಟ್ವಾಳ, ಜುಲೈ 13, 2026 (ಕರಾವಳಿ ಟೈಮ್ಸ್) : ಬುಲೆಟ್ ಬೈಕ್ ಸವಾರನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಬೈಕ್ ಗಾಯಗೊಂಡ ಘಟನೆ ಪುದು ಗ್ರಾಮದ ಮಾರಿಪಳ್ಳ ಸಮೀಪದ 10ನೇ ಮೈಲಿಕಲ್ಲು ಎಂಬಲ್ಲಿ ಸಂಭವಿಸಿದೆ. 

ಗಾಯಗೊಂಢ ಬುಲೆಟ್ ಸವಾರನನ್ನು ಫಾಜಿಲ್ ಸಿದ್ದೀಕ್ ಎಂದು ಹೆಸರಿಸಲಾಗಿದೆ. ಈತ ಕಾಲೇಜು ಮುಗಿಸಿ ಮಂಗಳೂರು ಕಡೆಯಿಂದ ಬರುತ್ತಿದ್ದ ವೇಳೆ 10ನೇ ಮೈಲಿಕಲ್ಲು ಎಂಬಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಬಾಯಿ, ಭುಜ, ಕಾಲು ಹಾಗೂ ಕಣ್ಣಿನ ಹುಬ್ಬಿಗೆ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳೀಯರು ಹಾಗೂ ಅಂಬ್ಯುಲೆನ್ಸ್ ಚಾಲಕ ಇಮ್ರಾನ್ ಅವರು ಪಡೀಲ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬೈಕ್ ಮಾಲಕಿ ಕೈರುನ್ನೀಸಾ ಹಸೈನಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುದು : ಬೈಕ್ ಉರುಳಿ ಬಿದ್ದು ಸವಾರ ಆಸ್ಪತ್ರೆಗೆ Rating: 5 Reviewed By: karavali Times
Scroll to Top