ಕೆನರಾ ಬ್ಯಾಂಕ್ ಫರಂಗಿಪೇಟೆ ಶಾಖಾ ಕಚೇರಿಗೆ ನುಗ್ಗಿದ ಕಳ್ಳರು : ಕಳವಿಗೆ ವಿಫಲ ಯತ್ನ - Karavali Times ಕೆನರಾ ಬ್ಯಾಂಕ್ ಫರಂಗಿಪೇಟೆ ಶಾಖಾ ಕಚೇರಿಗೆ ನುಗ್ಗಿದ ಕಳ್ಳರು : ಕಳವಿಗೆ ವಿಫಲ ಯತ್ನ - Karavali Times

728x90

13 July 2026

ಕೆನರಾ ಬ್ಯಾಂಕ್ ಫರಂಗಿಪೇಟೆ ಶಾಖಾ ಕಚೇರಿಗೆ ನುಗ್ಗಿದ ಕಳ್ಳರು : ಕಳವಿಗೆ ವಿಫಲ ಯತ್ನ

ಬಂಟ್ವಾಳ, ಜುಲೈ 13, 2026 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾತರ ಪೆÇಲೀಸ್ ಠಾಣಾ ವ್ಯಾಪ್ತಿಯ ಪರಂಗೀಪೇಟೆಯ ಮೆನಜಸ್ ಪ್ಲಾಝಾ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಬ್ಯಾಂಕ್ ಪರಂಗೀಪೇಟೆ ಶಾಖಾ ಕಚೇರಿಗೆ ಕಳ್ಳರು ನುಗ್ಗಿ ಕಳವಿಗೆ ವಿಫಲ ಯತ್ನಿ ನಡೆಸಿದ ಘಟನೆ ಜುಲೈ 12 ರ ರಾತ್ರಿ ವೇಳೆ ಸಂಭವಿಸಿದೆ. 

ಜುಲೈ 13 ರಂದು ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿಗಳು ಬಾಗಿಲು ತೆರೆಯುವ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಬ್ಯಾಂಕ್ ಮೇಲ್ಛಾವಣಿ ತುಂಡರಿಸಿ ಕಳ್ಳರು ಬ್ಯಾಂಕ್ ಒಳಗೆ ಪ್ರವೇಶಿಸಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾತರ ಠಾಣಾ ಪೊಲೀಸರು, ಬೆರಳಚ್ಚು ತಂಡ, ಸೋಕೋ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿರುವುದಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಸಮಗ್ರ ಪರಿಶೀಲನೆಯ ಬಳಿಕ ಈ ಬಗ್ಗೆ ಹೆಚ್ಚಿನ ವಿವರ ಗೊತ್ತಾಗಬೇಕಷ್ಟೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೆನರಾ ಬ್ಯಾಂಕ್ ಫರಂಗಿಪೇಟೆ ಶಾಖಾ ಕಚೇರಿಗೆ ನುಗ್ಗಿದ ಕಳ್ಳರು : ಕಳವಿಗೆ ವಿಫಲ ಯತ್ನ Rating: 5 Reviewed By: karavali Times
Scroll to Top