ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಲೋಕ ಅದಾಲತಿನಲ್ಲಿ ಒಂದಾದರು - Karavali Times ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಲೋಕ ಅದಾಲತಿನಲ್ಲಿ ಒಂದಾದರು - Karavali Times

728x90

12 July 2026

ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಲೋಕ ಅದಾಲತಿನಲ್ಲಿ ಒಂದಾದರು

ಬಂಟ್ವಾಳ ಲೋಕ ಅದಾಲತಿನಲ್ಲಿ 19 ಸಿವಿಲ್, 257 ಕ್ರಿಮಿನಲ್ ಪ್ರಕರಣಗಳ ಸಹಿತ ಒಟ್ಟು 42,658 ಪ್ರಕರಣಗಳು ಇತ್ಯರ್ಥ


ಬಂಟ್ವಾಳ, ಜುಲೈ 12, 2026 (ಕರಾವಳಿ ಟೈಮ್ಸ್) : ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿ-ಪತ್ನಿಯರು ಬಂಟ್ವಾಳದಲ್ಲಿ ಜುಲೈ 11 ರಂದು ನಡೆದ ಲೋಕ ಅದಾಲತಿನಲ್ಲಿ ಪರಸ್ಪರ ವಿರಸ ಮರೆತು ಒಂದಾದ ಘಟನೆ ವರದಿಯಾಗಿದೆ. 

ಪತಿ-ಪತ್ನಿ ಜೋಡಿಯೊಂದು 2025 ರಲ್ಲಿ ವಿಚ್ಛೇದನ ಕೋರಿ ಬಂಟ್ವಾಳ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತಿನಲ್ಲಿ ಭಾಗವಹಿಸಿದ್ದ ದಂಪತಿಯನ್ನು ನ್ಯಾಯಾಧೀಶರು, ವಕೀಲರು ಹಾಗೂ ಎರಡೂ ಕುಟುಂಬದ ಸದಸ್ಯರು ಸಮಾಲೋಚನೆ ನಡೆಸಿ ಇಬ್ಬರ ಮನಸ್ತಾಪವನ್ನು ಶಮನಗೊಳಿಸಿ ಮತ್ತೆ ಒಂದಾಗಲು ಅವಕಾಶ ಕಲ್ಪಿಸಿದರು. 

ಲೋಕ ಅದಾಲತ್‍ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ ಪಿ ಅವರ ಸಂಧಾನ ಪ್ರಯತ್ನದ ಫಲವಾಗಿ ದಂಪತಿಗಳು ಮತ್ತೆ ಪತಿ-ಪತ್ನಿಯರಾಗಿ ಜೀವನ ಮುಂದುವರಿಸಲು ಒಪ್ಪಿಕೊಂಡಿದ್ದಾರೆ. 

ರಾಜಿ ಸಂಧಾನ ಯಶಸ್ವಿಯಾಗಲು ಸಹಕರಿಸಿದ ದಂಪತಿಗಳ ಪರ ವಕೀಲರುಗಳಾದ ಪಿ ಭಾನುಶಂಕರ್ ಮತ್ತು ಪಿ ಜಯರಾಮ ರೈ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರು ಹಾಗೂ ಸಹ ವಕೀಲರು ಅಭಿನಂದನೆ ಸಲ್ಲಿಸಿದರು. ಸಂಧಾನ ಯಶಸ್ವಿಯಾದ ಹಿನ್ನಲೆಯಲ್ಲಿ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಮತ್ತೆ ದಾಂಪತ್ಯ ಜೀವನ ಮುಂದುವರಿಸಲು ಒಪ್ಪಿಕೊಂಡರು. 

ಜುಲೈ 11 ರಂದು ಬಂಟ್ವಾಳದಲ್ಲಿ ನಡೆದ ಲೋಕ ಅದಾಲತಿನಲ್ಲಿ 19 ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡು 44,48,941/- ರೂಪಾಯಿ ಸಂಗ್ರಹಗೊಂಡರೆ, 257 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡು 13,00,124/- ರೂಪಾಯಿ ಸಂಗ್ರಹವಾಗಿದೆ. 42,382 ದಾವಾ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡು 38,62,26,969/- ರೂಪಾಯಿ ಸಂಗ್ರಹವಾಗಿದೆ. ಇಟ್ಟು 42,658 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟಾರೆ 39,19,76,034/- ರೂಪಾಯಿ ಮೊತ್ತ ಸಂಗ್ರಹವಾಗಿದೆ. 

ಅದಾಲತಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ ಪಿ, ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಕೆ ಎನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹೇಮಯ್ಯ ಎಂ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಎಂ ಕೋಸ್ತಾ, ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಹರಿಣಿ ಕುಮಾರಿ ಹಾಗೂ ಶ್ರೀಮತಿ ಸರಸ್ವತಿ, ಅಪರ ಸರಕಾರಿ ವಕೀಲ ಬಿ ವೆಂಕರಮಣ ಶೆಣೈ ಅವರುಗಳು ಭಾಗವಹಿಸಿದ್ದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಲೋಕ ಅದಾಲತಿನಲ್ಲಿ ಒಂದಾದರು Rating: 5 Reviewed By: karavali Times
Scroll to Top