ಪೊಳಲಿ : ಕಾರು ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರ, ಸೇತುವೆ ಕೆಳಗೆ ಬಿದ್ದ ಸಹಸವಾರ - Karavali Times ಪೊಳಲಿ : ಕಾರು ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರ, ಸೇತುವೆ ಕೆಳಗೆ ಬಿದ್ದ ಸಹಸವಾರ - Karavali Times

728x90

6 July 2026

ಪೊಳಲಿ : ಕಾರು ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರ, ಸೇತುವೆ ಕೆಳಗೆ ಬಿದ್ದ ಸಹಸವಾರ

ಬಂಟ್ವಾಳ, ಜುಲೈ 06, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಸಹಸವಾರ ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಪೊಳಲಿ ಸೇತುವೆಯಲ್ಲಿ ಜುಲೈ 5 ರಂದು ಬೆಳಿಗ್ಗೆ ಸಂಭವಿಸಿದೆ. 

ಗಾಯಾಳು ಬೈಕ್ ಸವಾರರನ್ನು ಬೋಳಂತೂರು ನಿವಾಸಿ ಮೊಹಮ್ಮದ್ ಅನ್ಸಾಫ್ (22) ಹಾಗೂ ಸಹಸವಾರ ಮೊಹಮ್ಮದ್ ಸಂಶೀರ್ ಎಂದು ಹೆಸರಿಸಲಾಗಿದೆ. ಮೊಹಮ್ಮದ್ ಅನ್ಸಾಫ್ ಅವರ ಸವಾರರಾಗಿ ಹಾಗೂ ಸಂಶೀರ್ ಅವರು ಸಹಸವಾರರಾಗಿ ಬೈಕಿನಲ್ಲಿ ಜುಲೈ 5 ರಂದು ಪೊಳಲಿ ಕಡೆಗೆ ಸಂಚರಿಸುತ್ತಿದ್ದ ವೇಳೆ ಪೊಳಲಿ ಸೇತುವೆಗೆ ತಲುಪಿದಾಗ ಬಜ್ಪೆ ಕಡೆಯಿಂದ ಹರೀಶ್ ಆಚಾರ್ಯ ಅವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ಸವಾರ ಅನ್ಸಾಫ್ ರಸ್ತೆಗೆಸೆಯಲ್ಪಟ್ಟು, ಸಹಸವಾರ ಸಂಶೀರ್ ಅವರು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸೇರಿದ ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪೊಳಲಿ : ಕಾರು ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರ, ಸೇತುವೆ ಕೆಳಗೆ ಬಿದ್ದ ಸಹಸವಾರ Rating: 5 Reviewed By: karavali Times
Scroll to Top