ಬಂಟ್ವಾಳ, ಜುಲೈ 06, 2026 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಳೆ ಮುಂದುವರಿದಿದ್ದು, ಹಲವೆಡೆ ಹಲವು ಮನೆಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಬಾಳ್ತಿಲ ಗ್ರಾಮದ ಕುರ್ಪೆ ನಿವಾಸಿ ಜೂಲಿಯನ ಪಾಯ್ಸ ಕೋಂ ಚಾರ್ಲಿ ವೇಗಸ್ ಅವರ ಮನೆಯ ಮೇಲೆ ಮರ ಬಿದ್ದು ಮನೆಗೆ ಬಾಗಶ ಹಾನಿಯಾಗಿದೆ. ಬಿ ಆರ್ ನಗರ ನಿವಾಸಿ ನಾರಾಯಣ ನಾಯ್ಕ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಬಾಗಶಃ ಹಾನಿ ಸಂಭವಿಸಿದೆ. ನರಿಕೊಂಬು ಗ್ರಾಮದ ಕೆದ್ದೇಲು ನಿವಾಸಿ ಶ್ರೀಮತಿ ಲೀಲಾವತಿ ಕೋಂ ಸೋಮಪ್ಪ ಸಪಲ್ಯ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಗೋಳ್ತಮಜಲು ಗ್ರಾಮದ ಕೆ ಸಿ ರೋಡ್ ನಿವಾಸಿ ಶೇಖರ ಪೂಜಾರಿ ಬಿನ್ ಗಿರಿಯಪ್ಪ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಬಲ್ಲೆಕೋಡಿ ನಿವಾಸಿ ಜೋಹರ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಬಾಳ್ತಿಲ ಗ್ರಾಮದ ದಾಸಕೋಡಿ ನಿವಾಸಿ ನಾರಾಯಣ ಮೂಲ್ಯ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ಬಾಗಶಃ ಹಾನಿಯಾಗಿದೆ. ಕಡೇಶ್ವಾಲ್ಯ ಗ್ರಾಮದ ಅಳಕೆ ನಿವಾಸಿ ಚಂದ್ರಾವತಿ ಕೋಂ ಸಂಜೀವ ಶೆಟ್ಟಿ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮಾಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿಂಬದಿಯ ಬರೆ ಜರಿದು ಶಾಲಾ ಕಟ್ಟಡಕ್ಕೆ ತಾಗಿರುತ್ತದೆ ಹಾಗೂ ಶಾಲೆಯ ತಡೆಗೋಡೆಗೆ ಹಾನಿಯಾಗಿದೆ.
6 July 2026
- Blogger Comments
- Facebook Comments
Subscribe to:
Post Comments (Atom)
























0 comments:
Post a Comment