ಪುತ್ತೂರು ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡಿದ ವೆಬ್ ನ್ಯೂಸ್ ಪೋರ್ಟಲುಗಳ ವಿರುದ್ದ ಪ್ರಕರಣ ದಾಖಲು - Karavali Times ಪುತ್ತೂರು ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡಿದ ವೆಬ್ ನ್ಯೂಸ್ ಪೋರ್ಟಲುಗಳ ವಿರುದ್ದ ಪ್ರಕರಣ ದಾಖಲು - Karavali Times

728x90

9 July 2026

ಪುತ್ತೂರು ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡಿದ ವೆಬ್ ನ್ಯೂಸ್ ಪೋರ್ಟಲುಗಳ ವಿರುದ್ದ ಪ್ರಕರಣ ದಾಖಲು

ಪುತ್ತೂರು, ಜುಲೈ 09, 2026 (ಕರಾವಳಿ ಟೈಮ್ಸ್) : ಪುತ್ತೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಕೋಮು ಭಾವನೆಗಳನ್ನು ಪ್ರಚೋದಿಸುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಸಂದೇಶಗಳನ್ನು ಪ್ರಸಾರ ಮಾಡಿದ ಕೆಲವೊಂದು ವೆಬ್ ನ್ಯೂಸ್ ಮಾಧ್ಯಮಗಳ ವಿರುದ್ಧ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪುತ್ತೂರು ಛಾವಡಿ ಇನ್ಸ್ಟಾಗ್ರಾಂ, ಹೊಸದಿಗಂತ, ಝೂಮ್ ಇನ್ ಟಿವಿ.ಆನ್ ಲೈನ್, ನ್ಯೂಸ್ ಫೋಕಸ್ ಕನ್ನಡ.ಕಾಂ. ಉದಯವಾಣಿ, ಪ್ರಖರ ನ್ಯೂಸ್.ಕಾಂ ವೆಬ್ ನ್ಯೂಸ್ ಮೀಡಿಯಾ ಹಾಗೂ ಕರ್ನಾಟಕ ಪೋರ್ಟ್ ಫೋಲಿಯೋ@ಕರ್ನಾಟಕ ಪೋರ್ಟ್ ಫೊಲಿಯೋ ಟ್ವಿಟರ್ ಪೇಜ್ ಗಳ ವಿರುದ್ದ 353(2) ಬಿ ಎನ್ ಎಸ್-2023 ರಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜುಲೈ 8 ರಂದು ಪುತ್ತೂರು ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಮೇಲಿನ ವೆಬ್  ನ್ಯೂಸ್ ಪೋರ್ಟಲುಗಳು ಸತ್ಯ ಘಟನೆಯನ್ನು ಪ್ರಸಾರ ಮಾಡದೇ  ಹಿಂದೂ-ಮುಸ್ಲಿಂ ಎಂದು ಬಿಂಬಿಸಿ  ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಿದ ಬಗ್ಗೆ ನೊಂದ ವ್ಯಕ್ತಿಗಳು ನೀಡಿದ ದೂರಿನಂತೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜಿಲ್ಲಾ ಪೆÇಲೀಸ್ ಘಟಕದ ವ್ಯಾಪ್ತಿಯಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಹಾಗೂ ಕೋಮು ಪ್ರಚೋದನಾತ್ಮಕ ಸಂದೇಶಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡಿದ ವೆಬ್ ನ್ಯೂಸ್ ಪೋರ್ಟಲುಗಳ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top