12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ - Karavali Times 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ - Karavali Times

728x90

9 July 2026

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ

ಮಂಗಳೂರು, ಜುಲೈ 09, 2026 (ಕರಾವಳಿ ಟೈಮ್ಸ್) : ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅ.ಕ್ರ. 236/2014 ಕಲಂ 364(ಂ),395,R/W 34 ಐಪಿಸಿ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 12 ವರ್ಷಗಳಿಂದ ದಸ್ತಗಿರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಮಂಗಳೂರು-ಜೆಪ್ಪು ನಿವಾಸಿ ಉಸ್ಮಾಯಿಲ್ ಎಂಬವರ ಪುತ್ರ ಶಕೀಲ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಯ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಡಕಾಯಿತಿ ಪ್ರಕರಣದಲ್ಲಿ ಪ್ರಕರಣ ದಾಖಲಾಗಿನಿಂದಲೂ ದಸ್ತಗಿರಿಗೆ ಸಿಗದೇ ತಲೆಮರಸಿಕೊಂಡಿದ್ದ ಕಾರಣ ಆರೋಪಿತನ ಮೇಲೆ ಅಬ್ಸ್ಕಾಂಡಿಂಗ್ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆರೋಪಿ ಸುಮಾರು 12 ವರ್ಷಗಳಿಂದ ದಸ್ತಗಿರಿಗೆ ಸಿಗದೇ ತಲೆಮರಸಿಕೊಂಡಿದ್ದರಿಂದ ನ್ಯಾಯಾಲಯವು ಪ್ರಕರಣವನ್ನು ಎಲ್.ಪಿ.ಸಿ ಪ್ರಕರಣವನ್ನಾಗಿ ಪರಿವರ್ತಿಸಿತ್ತು. 

ಆರೋಪಿಯ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಜುಲೈ 9 ರಂದು ನಂದಿಗುಡ್ಡ ಸರ್ಕಲ್ ಬಳಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪುಟ್ಟರಾಮ ಹಾಗೂ ಮಲಿಕ್ ಜಾನ್ ಅವರು ಪತ್ತೆ ಹಚ್ಚಿ ಬಂಧಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ. ವಾರಂಟ್ ಆರೋಪಿ ದಸ್ತಗಿರಿ Rating: 5 Reviewed By: karavali Times
Scroll to Top