ನೀಟ್ ಹೋರಾಟದ ಬಗ್ಗೆ ಧಾರ್ಮಿಕ ತಳುಕು ಹಾಕಿ ವಾಟ್ಸಪ್ಪಿನಲ್ಲಿ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಕಿಡಿಗೇಡಿ ಬಂಧಿಸಿದ ವಿಟ್ಲ ಪೊಲೀಸರು - Karavali Times ನೀಟ್ ಹೋರಾಟದ ಬಗ್ಗೆ ಧಾರ್ಮಿಕ ತಳುಕು ಹಾಕಿ ವಾಟ್ಸಪ್ಪಿನಲ್ಲಿ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಕಿಡಿಗೇಡಿ ಬಂಧಿಸಿದ ವಿಟ್ಲ ಪೊಲೀಸರು - Karavali Times

728x90

24 July 2026

ನೀಟ್ ಹೋರಾಟದ ಬಗ್ಗೆ ಧಾರ್ಮಿಕ ತಳುಕು ಹಾಕಿ ವಾಟ್ಸಪ್ಪಿನಲ್ಲಿ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಕಿಡಿಗೇಡಿ ಬಂಧಿಸಿದ ವಿಟ್ಲ ಪೊಲೀಸರು

ಬಂಟ್ವಾಳ, ಜುಲೈ 24, 2026 (ಕರಾವಳಿ ಟೈಮ್ಸ್) : ನೀಟ್ ಹೋರಾಟವನ್ನು ಧಾರ್ಮಿಕವಾಗಿ ಥಳುಕು ಹಾಕಿ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಕೇಪು ಗ್ರಾಮದ ನಿವಾಸಿ ಭರತ್ (36) ಎಂದು ಹೆಸರಿಸಲಾಗಿದೆ. ಈತ ಕೆ ಎಫ್ ಸಿ ಖಂಡಿಗ ಎಂಬ ವಾಟ್ಸಾಪ್ ಗ್ರೂಪ್ ಸದಸ್ಯನಾಗಿದ್ದು, ಜುಲೈ 23 ರಂದು ಗ್ರೂಪಿನಲ್ಲಿ ಬಂದ ಸ್ಕ್ರೀನ್ ಶಾಟ್ ನೋಡಿದಾಗ ಅದರಲ್ಲಿ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಹಾಗೂ ಸಾರ್ವಜನಿಕರಿಗೆ ಸಾರ್ವಜನಿಕ ನೆಮ್ಮದಿಗೆ ಭಂಗವುಟಾಗುವಂತಹ ಬರಹಗಳಿದ್ದು, ಸದ್ರಿ ಸಂದೇಶವನ್ನು ಪರಿಶೀಲಿಸಿದಾಗ ಕೇಪು ಭರತ್ ಎಂಬಾತನು ಸದ್ರಿ ಬರಹಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದು ಗೊತ್ತಾಗಿರುವ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ವಿಟ್ಲ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಿವಾಸಿ ಮುಹಮ್ಮದ್ ಹನೀಫ್ ಎಂಬವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ  ಅಪರಾಧ ಕ್ರಮಾಂಕ 160/2026  ಕಲಂ 197(1)(ಎ), 197(1)(ಸಿ), 353(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ನೀಟ್ ಹೋರಾಟದ ಬಗ್ಗೆ ಧಾರ್ಮಿಕ ತಳುಕು ಹಾಕಿ ವಾಟ್ಸಪ್ಪಿನಲ್ಲಿ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಕಿಡಿಗೇಡಿ ಬಂಧಿಸಿದ ವಿಟ್ಲ ಪೊಲೀಸರು Rating: 5 Reviewed By: karavali Times
Scroll to Top