ಮಂಗಳೂರು, ಜುಲೈ 24, 2026 (ಕರಾವಳಿ ಟೈಮ್ಸ್) : ಶ್ರೀರಾಮ್ ಫೈನಾನ್ಸ್ ವತಿಯಿಂದ ವಾಹನ ಚಾಲಕ-ಮಾಲಕರ ಹಾಗೂ ಮೆಕ್ಯಾನಿಕ್‍ಗಳ ಮಕ್ಕಳಿಗೆ ಕಳೆದ 13 ವರ್ಷಗಳಿಂದ ವಿದ್ಯಾರ್ಥಿವೇತನ (ಸ್ಕಾಲರ್ ಶಿಪ್) ಯೋಜನೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
2026-27ನೇ ಸಾಲಿನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 31 ಕೊನೆ ದಿನಾಂಕವಾಗಿದೆ. 7ನೇ ತರಗತಿ ಉತ್ತೀರ್ಣರಾಗಿ, ಪ್ರಸ್ತುತ 8ನೇ ತರಗತಿಯಿಂದ 11ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿದ್ದು, ಹಿಂದಿನ ತರಗತಿಯಲ್ಲಿ 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 8 ರಿಂದ 11ನೇ ತರಗತಿವರೆಗಿನ ವಿದ್ಯಾರ್ಥಿಗಳು ಹಿಂದಿನ ವರ್ಷಗಳಲ್ಲಿ ಅರ್ಜಿ ಸಲ್ಲಿಸದಿದ್ದರೂ ಪ್ರಸ್ತುತ ವರ್ಷದಲ್ಲಿ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, ಆದರೆ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹಿಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಿದವರು ನವೀಕರಣ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಭರ್ತಿ ಮಾಡಿದ ಸಂಸ್ಥೆಯ ಅರ್ಜಿ ಫಾರಂ ಜೊತೆಗೆ ವಿದ್ಯಾರ್ಥಿಯ 1 ಪಾಸ್ ಪೆÇೀರ್ಟ್ ಗಾತ್ರದ ಫೆÇೀಟೋ, ಶಾಲಾ ಮುಖ್ಯಸ್ಥರ ಸಹಿ ಹಾಗೂ ಮೊಹರು ಹೊಂದಿರುವ 60% ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರುವ ಅಂಕಪಟ್ಟಿಯ ಪ್ರತಿ, ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪೆÇೀಷಕರ ಆಧಾರ್ ಕಾರ್ಡ್ ಪ್ರತಿ, ಪೆÇೀಷಕರ ಚಾಲ್ತಿಯಲ್ಲಿರುವ (ವ್ಯಾಲಿಡ್) ಡ್ರೈವಿಂಗ್ ಲೈಸೆನ್ಸ್ ಪ್ರತಿ, ವಾಹನದ ಆರ್ ಸಿ ಪ್ರತಿಗಳೊಂದಿಗೆ ಅರ್ಹ ವಿದ್ಯಾರ್ಥಿಗಳು ಸಮೀಪದ ಶ್ರೀರಾಮ್ ಫೈನಾನ್ಸ್ ಶಾಖೆಗೆ ಸಲ್ಲಿಸುವಂತೆ ಸಂಸ್ಥೆಯ ರೀಜನಲ್ ಬಿಝಿನೆಸ್ ಹೆಡ್ ಚೇತನ್ ಅರಸ್ ಅವರು ತಿಳಿಸಿದ್ದಾರೆ.











0 comments:
Post a Comment