ಮಂಗಳೂರು, ಜುಲೈ 19, 2026 (ಕರಾವಳಿ ಟೈಮ್ಸ್) : ನಗರದ ಉರ್ವಾಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಶ್ರೀಮತಿ ನಿರ್ಮಲಾ ಮಠಪತಿ ಅವರು ಭೇಟಿ ನೀಡಿದರು.
ಅಕಾಡೆಮಿಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಅವರು ಸಮಾಲೋಚನೆ ನಡೆಸಿದರು. ಈ ಸಂಧರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಮಂಗಳೂರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಅಕಾಡೆಮಿ ಮಾಜಿ ಸದಸ್ಯರಾದ ರೂಪಕಲಾ ಆಳ್ವ, ರತ್ನಾವತಿ ಜೆ. ಬೈಕಾಡಿ ಮತ್ತು ಗಾಯಕ ನಾದ ಮಣಿನಾಲ್ಕೂರು ಉಪಸ್ಥಿತರಿದ್ದರು.











0 comments:
Post a Comment