ಸಿದ್ದಕಟ್ಟೆ : ಜಾಗದ ತಕರಾರಿಗೆ ನೆರೆಮನೆಯವರಿಂದ ಕೃಷಿ ನಾಶ ಮಾಡಿ ಜೀವಬೆದರಿಕೆ - Karavali Times ಸಿದ್ದಕಟ್ಟೆ : ಜಾಗದ ತಕರಾರಿಗೆ ನೆರೆಮನೆಯವರಿಂದ ಕೃಷಿ ನಾಶ ಮಾಡಿ ಜೀವಬೆದರಿಕೆ - Karavali Times

728x90

17 July 2026

ಸಿದ್ದಕಟ್ಟೆ : ಜಾಗದ ತಕರಾರಿಗೆ ನೆರೆಮನೆಯವರಿಂದ ಕೃಷಿ ನಾಶ ಮಾಡಿ ಜೀವಬೆದರಿಕೆ

ಬಂಟ್ವಾಳ, ಜುಲೈ 17, 2026 (ಕರಾವಳಿ ಟೈಮ್ಸ್) : ಸಂಬೆಟ್ಟು ಗ್ರಾಮದ ಸಿದ್ದಕಟ್ಟೆ ಬಿತ್ತಾಡಿಪಾದೆ ಎಂಬಲ್ಲಿ ಶಾಂತಿ ಕುಮಾರ್ ಎಂಬವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ನೆರೆಕರೆಯ ಮನೆ ಮಂದಿ ಕೃಷಿ ನಾಶಪಡಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಘಟನೆ ಜುಲೈ 16 ರಂದು ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಈ ಬಗ್ಗೆ ಶಾಂತಿ ಕುಮಾರ್ (44) ಅವರು ದೂರು ನೀಡಿದ್ದು, ಇವರ ಸ್ವಾಧೀನದಲ್ಲಿರುವ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಬಿತ್ತಾಡಿಪಾದೆ ಎಂಬಲ್ಲಿ ಸುಮಾರು 0.25 ಎಕ್ರೆ ಕೃಷಿ ಭೂಮಿ ವಿಚಾರವಾಗಿ ಇವರಿಗೂ ಪಕ್ಕದ ಮನೆಯ ಸೇಸಪ್ಪ ಶೇರಿಗಾರ್ ಅವರಿಗೂ ತಕರಾರಿದ್ದು, ಜುಲೈ 16 ರಂದು ಬೆಳಿಗ್ಗೆ 8.30ಕ್ಕೆ ಶಾಂತಿ ಕುಮಾರ್ ಅವರು ಕೆಲಸಕ್ಕೆ ಹೋಗಿದ್ದು, ಅವರ ಮಕ್ಕಳು ಶಾಲೆಗೆ ಹೋಗಿದ್ದರು. ಮದ್ಯಾಹ್ನ 2.30 ಗಂಟೆಗೆ ಶಾಂತಿ ಕುಮಾರ್ ಅವರು ವಾಪಾಸು ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಪಕ್ಕದ ಮನೆಯ ಸೇಸಪ್ಪ  ಶೇರಿಗಾರ್, ಅವರ ಪತ್ನಿ ಸವಿತಾ, ಅವರ ಮಕ್ಕಳಾದ ಸವೀಕ್ಷಾ, ಸಮರ್ಥ್, ಸಾಕ್ಷಾತ್, ಅತ್ತೆ ಶಾಂಭವಿ ಮತ್ತು ಕೆಲಸದವರೊಂದಿಗೆ ಸೇರಿ ಶಾಂತಿ ಕುಮಾರ್ ಅವರು ಬೆಳೆದಿದ್ದ 7 ವರ್ಷ ಪ್ರಾಯದ 150 ಅಡಿಕೆ ಸಸಿಗಳನ್ನು ಕಡಿದು ಹಾಕಿ, ಜೆಸಿಬಿಯಿಂದ ಸಮತಟ್ಟು ಮಾಡುತಿದ್ದು, ಈ ಬಗ್ಗೆ ಸೇಸಪ್ಪ ಶೇರಿಗಾರ್ ಅವರಲ್ಲಿ ಪ್ರಶ್ನಿಸಿದಕ್ಕೆ ಸೇಸಪ್ಪ ಶೇರಿಗಾರ್ ಮತ್ತು ಅವರ ಮನೆಯವರು ಈ ಜಾಗ ನಮಗೆ ಸೇರಿದ್ದು ಅದಕ್ಕೆ ನಾವು ಇದರಲ್ಲಿದ್ದ ಕೃಷಿಯನ್ನು ನಾಶ ಮಾಡಿರುತ್ತೇವೆ, ನೀವುಗಳು ಧೈರ್ಯವಿದ್ದರೆ ತಡೆಯಿರಿ, ಮುಂದೆ ಬಂದರೆ ನಿಮ್ಮನ್ನೂ ಅಡಿಕೆ ಸಸಿಯನ್ನು ಕಡಿದು ಹಾಕಿದ ಹಾಗೆನೆ ಕಡಿದು ಹಾಕುತ್ತೇವೆ ಎಂದು ಬೆದರಿಸಿ, ಅವಾಚ್ಯ ಶಬ್ದಗಳಿಂದ ಬೈದು ಜಾಗಕ್ಕೆ ಹೋಗದಂತೆ ತಡೆದಿರುತ್ತಾರೆ. ಬೆಳೆದ ಕೃಷಿ ನಾಶ ಮಾಡಿರುವುದರಿಂದ ಸುಮಾರು 50 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಸಿದ್ದಕಟ್ಟೆ : ಜಾಗದ ತಕರಾರಿಗೆ ನೆರೆಮನೆಯವರಿಂದ ಕೃಷಿ ನಾಶ ಮಾಡಿ ಜೀವಬೆದರಿಕೆ Rating: 5 Reviewed By: karavali Times
Scroll to Top