ಉದ್ಯೋಗಾವಕಾಶ : ಜುಲೈ 30 ರಂದು ಪಡೀಲ್ ಪ್ರಜಾಸೌಧದಲ್ಲಿ ನೇರ ಸಂದರ್ಶನ - Karavali Times ಉದ್ಯೋಗಾವಕಾಶ : ಜುಲೈ 30 ರಂದು ಪಡೀಲ್ ಪ್ರಜಾಸೌಧದಲ್ಲಿ ನೇರ ಸಂದರ್ಶನ - Karavali Times

728x90

24 July 2026

ಉದ್ಯೋಗಾವಕಾಶ : ಜುಲೈ 30 ರಂದು ಪಡೀಲ್ ಪ್ರಜಾಸೌಧದಲ್ಲಿ ನೇರ ಸಂದರ್ಶನ

ಮಂಗಳೂರು, ಜುಲೈ 24, 2026 (ಕರಾವಳಿ ಟೈಮ್ಸ್) : ಎಕ್ಸ್‍ಪರ್ಟ್ ಕಾಲೇಜು, ಕ್ಯಾಲಿಬರ್ ಹಾಗೂ ಕೋಜೆಂಟ್  ಇ-ಸರ್ವಿಸಸ್ ಕಂಪೆನಿಯ ವತಿಯಿಂದ ಖಾಲಿ ಇರುವ ಹಾಸ್ಟೆಲ್ ವಾರ್ಡನ್, ಕಸ್ಟಮರ್ ಸಪೋರ್ಟ್ ಅಸೋಸಿಯೇಟ್ ಮತ್ತು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗಳಿಗೆ ನೇರ ಸಂದರ್ಶನ ಜುಲೈ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೀಲ್ ಪ್ರಜಾಸೌಧದ ನೆಲಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಆಯೋಜಿಸಲಾಗಿದೆ. 

ನೇರ ಸಂದರ್ಶನದಲ್ಲಿ ಪಿ.ಯು.ಸಿ, ಡಿಪ್ಲೊಮಾ, ಯಾವುದೇ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು.  ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಉದ್ಯೋಗಾವಕಾಶ : ಜುಲೈ 30 ರಂದು ಪಡೀಲ್ ಪ್ರಜಾಸೌಧದಲ್ಲಿ ನೇರ ಸಂದರ್ಶನ Rating: 5 Reviewed By: karavali Times
Scroll to Top