ಅಪ್ರಾಪ್ತ ಶಾಲಾ ಬಾಲಕಿ ಮೇಲೆ ನೆರೆಮನೆಯಾತನಿಂದ ಲೈಂಗಿಕ ದೌರ್ಜನ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು - Karavali Times ಅಪ್ರಾಪ್ತ ಶಾಲಾ ಬಾಲಕಿ ಮೇಲೆ ನೆರೆಮನೆಯಾತನಿಂದ ಲೈಂಗಿಕ ದೌರ್ಜನ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು - Karavali Times

728x90

11 July 2026

ಅಪ್ರಾಪ್ತ ಶಾಲಾ ಬಾಲಕಿ ಮೇಲೆ ನೆರೆಮನೆಯಾತನಿಂದ ಲೈಂಗಿಕ ದೌರ್ಜನ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

ಸುಳ್ಯ, ಜುಲೈ 11, 2026 (ಕರಾವಳಿ ಟೈಮ್ಸ್) : ಅಪ್ರಾಪ್ತ ಶಾಲಾ ಬಾಲಕಿಯ ಜೊತೆ ಸಲುಗೆ ಬೆಳೆಸಿ ಮನೆಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ ನೆರೆ ಮನೆ ನಿವಾಸಿಯ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. 

ಆರೋಪಿಯನ್ನು ಬಾಲಕಿಯ ನೆರೆಮನೆ ನಿವಾಸಿ ಮಂಜುನಾಥ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮುಖ್ಯೋಪಾಧ್ಯಾಯರು ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿ  ಶಾಲೆಗೆ ಬಾರದಿರುವ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯರು ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ, ಬಾಲಕಿಯ ನೆರೆಮನೆಯ ನಿವಾಸಿ ಹಾಗೂ ಬಾಲಕಿಯ ಪರಿಚಯಸ್ಥನಾದ ಆರೋಪಿ ಮಂಜುನಾಥ ಎಂಬಾತ ಬಾಲಕಿಯೊಂದಿಗೆ ಸಲುಗೆಯಿಂದ ಇದ್ದವನು, ಜೂನ್ 22 ರಿಂದ ಜುಲೈ 9ರ ಅವಧಿಯಲ್ಲಿ ಬಾಲಕಿಯನ್ನು ಆತನ ಮನೆಗೆ ಕರೆತಂದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. 

ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಮೇರೆಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2026 ಕಲಂ 64(2)(ಎಂ) 65(1) ಬಿ ಎನ್ ಎಸ್ 2023 ಮತ್ತು ಕಲಂ 4,5 (1), 6 ಪೋಕ್ಸೋ ಕಾಯ್ದೆ 2012 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಶಾಲಾ ಬಾಲಕಿ ಮೇಲೆ ನೆರೆಮನೆಯಾತನಿಂದ ಲೈಂಗಿಕ ದೌರ್ಜನ್ಯ : ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು Rating: 5 Reviewed By: karavali Times
Scroll to Top