ಮಂಗಳೂರು, ಜುಲೈ 24, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ರಾಹುಲ್ ರತ್ನ ಪಾಂಡೆ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಇಲ್ಲಿನ ಆಯುಕ್ತರಾಗಿದ್ದ ಕೆಎಎಸ್ ಅಧಿಕಾರಿ ರವಿಚಂದ್ರ ನಾಯ್ಕ್ ಅವರನ್ನು ಸರಕಾರ ವರ್ಗಾವಣೆಗೊಳಿಸಿದ್ದು, ಅವರ ಸ್ಥಾನಕ್ಕೆ ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಶನ್ ಲಿಮಿಟೆಡ್ (ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ - ಕೆ ಎಸ್ ಎಂ ಎಸ್ ಸಿ ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾಗಿ (ಮ್ಯಾನೇಜಿಂಗ್ ಡೈರೆಕ್ಟರ್) ಕಾರ್ಯನಿರ್ವಹಿಸುತ್ತಿದ್ದ 2018 ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ನೂತನ ಕಮಿಷನರ್ ಆಗಿ ನೇಮಿಸಿ ಜುಲೈ 24 ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.











0 comments:
Post a Comment