ತೆಂಕಬೆಳ್ಳೂರು ಮಳೆ ಹಾನಿ ಹಾಗೂ ಕೊಳಕೆ ವಿದ್ಯುತ್ ಅವಘಡ ಸಂಭವಿಸಿದ ಮನೆಗಳಿಗೆ ಶಾಸಕ ರಾಜೇಶ್ ನಾಯಕ್ ಭೇಟಿ - Karavali Times ತೆಂಕಬೆಳ್ಳೂರು ಮಳೆ ಹಾನಿ ಹಾಗೂ ಕೊಳಕೆ ವಿದ್ಯುತ್ ಅವಘಡ ಸಂಭವಿಸಿದ ಮನೆಗಳಿಗೆ ಶಾಸಕ ರಾಜೇಶ್ ನಾಯಕ್ ಭೇಟಿ - Karavali Times

728x90

30 July 2026

ತೆಂಕಬೆಳ್ಳೂರು ಮಳೆ ಹಾನಿ ಹಾಗೂ ಕೊಳಕೆ ವಿದ್ಯುತ್ ಅವಘಡ ಸಂಭವಿಸಿದ ಮನೆಗಳಿಗೆ ಶಾಸಕ ರಾಜೇಶ್ ನಾಯಕ್ ಭೇಟಿ

 ಬಂಟ್ವಾಳ, ಜುಲೈ 30, 2026 (ಕರಾವಳಿ ಟೈಮ್ಸ್) : ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆಯಲ್ಲಿ ಬಿರುಗಾಳಿ ಹಾಗೂ ಭಾರೀ ಮಳೆಯಿಂದ ಜಯ ಸಪಲ್ಯ ಅವರ ಮನೆಯ ಛಾವಣಿ ಕುಸಿದು ಹಾನಿಗೊಳಗಾದ ಸ್ಥಳಕ್ಕೆ ಹಾಗೂ ಸಜಿಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಚಂದ್ರಹಾಸ ಪೂಜಾರಿ ಅವರ ಮನೆಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಜುಲೈ 30 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ್, ಪಿಡಿಒ ರಶ್ಮಿ ಆರ್ ಕಿಲ್ಲೆ, ಕಂದಾಯ ಇಲಾಖೆಯ ಅಧಿಕಾರಿ ರಿಟಾ ಡಿ’ಸೋಜಾ, ಪ್ರಮುಖರಾದ ರಘುವೀರ್ ಆಚಾರ್ಯ, ಸುಂದರ್, ರಾಮಚಂದ್ರ, ತಿರುಲೇಶ್, ಶ್ರೀಕಾಂತ್ ಶೆಟ್ಟಿ ಸಜಿಪ, ಜಯಪ್ರಕಾಶ್ ಪೆರ್ವ, ಯೋಗೀಶ್ ಕೊಲ್ಯ, ಉಮೇಶ್ ಬಂಗೇರ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ತೆಂಕಬೆಳ್ಳೂರು ಮಳೆ ಹಾನಿ ಹಾಗೂ ಕೊಳಕೆ ವಿದ್ಯುತ್ ಅವಘಡ ಸಂಭವಿಸಿದ ಮನೆಗಳಿಗೆ ಶಾಸಕ ರಾಜೇಶ್ ನಾಯಕ್ ಭೇಟಿ Rating: 5 Reviewed By: karavali Times
Scroll to Top