ಜುಲೈ 11 ರಂದು ಮಂಚಿ ಗ್ರಾ.ಪಂ. ನಿವೃತ್ತ ಪಿಡಿಒ ಅವರಿಗೆ ಇಂದಿರಾ ಪ್ರಿಯದರ್ಶಿನಿ ಸಹಕಾರಿ ಸಂಘದಿಂದ ಅಭಿನಂದನಾ ಸಮಾರಂಭ - Karavali Times ಜುಲೈ 11 ರಂದು ಮಂಚಿ ಗ್ರಾ.ಪಂ. ನಿವೃತ್ತ ಪಿಡಿಒ ಅವರಿಗೆ ಇಂದಿರಾ ಪ್ರಿಯದರ್ಶಿನಿ ಸಹಕಾರಿ ಸಂಘದಿಂದ ಅಭಿನಂದನಾ ಸಮಾರಂಭ - Karavali Times

728x90

4 July 2026

ಜುಲೈ 11 ರಂದು ಮಂಚಿ ಗ್ರಾ.ಪಂ. ನಿವೃತ್ತ ಪಿಡಿಒ ಅವರಿಗೆ ಇಂದಿರಾ ಪ್ರಿಯದರ್ಶಿನಿ ಸಹಕಾರಿ ಸಂಘದಿಂದ ಅಭಿನಂದನಾ ಸಮಾರಂಭ

ಬಂಟ್ವಾಳ, ಜುಲೈ 04, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮ ಪಂಚಾಯತಿನಲ್ಲಿ ಹಲವು ವರ್ಷಗಳ ಕಾಲ ಪಿಡಿಒ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಶ್ರೀಮತಿ ಮಾಯಾ ಕುಮಾರಿ ಅವರಿಗೆ ಕುಕ್ಕಾಜೆ ಇಂದಿರಾ ಪ್ರಿಯದರ್ಶಿನಿ ಸಹಕಾರಿ ಸಂಘದ ವತಿಯಿಂದ ಅಭಿನಂದನಾ ಸಮಾರಂಭವು ಜುಲೈ 11 ರಂದು ಶನಿವಾರ ಸಂಜೆ 4 ಗಂಟೆಗೆ ಕುಕ್ಕಾಜೆ-ಪತ್ತುಮುಡಿಯ ಹಲೀಮಾ ಪ್ಲಾಝಾದಲ್ಲಿ ನಡೆಯಲಿದೆ. 

ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅವರು ಅಭಿನಂದನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾ ಪಂ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ ಹಾಗೂ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ರಮಾನಾಂದ ನೂಜಿಪ್ಪಾಡಿ ಅವರು ಭಾಗವಹಿಸಲಿದ್ದಾರೆ ಎಂದು ಇಂದಿರಾ ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ಉಮ್ಮರ್ ಮಂಚಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 11 ರಂದು ಮಂಚಿ ಗ್ರಾ.ಪಂ. ನಿವೃತ್ತ ಪಿಡಿಒ ಅವರಿಗೆ ಇಂದಿರಾ ಪ್ರಿಯದರ್ಶಿನಿ ಸಹಕಾರಿ ಸಂಘದಿಂದ ಅಭಿನಂದನಾ ಸಮಾರಂಭ Rating: 5 Reviewed By: karavali Times
Scroll to Top