ಅಕ್ರಮ ಮರಳು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು : ಇಬ್ಬರು ಚಾಲಕರ ವಿರುದ್ದ ಪ್ರಕರಣ ದಾಖಲು - Karavali Times ಅಕ್ರಮ ಮರಳು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು : ಇಬ್ಬರು ಚಾಲಕರ ವಿರುದ್ದ ಪ್ರಕರಣ ದಾಖಲು - Karavali Times

728x90

4 July 2026

ಅಕ್ರಮ ಮರಳು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು : ಇಬ್ಬರು ಚಾಲಕರ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ, ಜುಲೈ 04, 2026 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು ಎರಡು ಲಾರಿಗಳನ್ನು ಮರಳು ಸಹಿತ ಇಬ್ಬರು ಚಾಲಕರನ್ನು ಬಂಧಿಸಿದ ಘಟನೆ ಕುಳ ಗ್ರಾಮದ ಓಜಾಳ ಎಂಬಲ್ಲಿ ಜುಲೈ 4 ರಂದು ಮಧ್ಯಾಹ್ನ ನಡೆದಿದೆ. 

ಜುಲೈ 4 ರಂದು ಮಧ್ಯಾಹ್ನ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ವಿಟ್ಲ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ ದೇವಾಡಿಗ ಅವರಿಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಕುಳ ಗ್ರಾಮದ ಓಜಾಲ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ಸ್ಥಳದಲ್ಲಿ ಕೆಎ51 ಎಎ3057 ಹಾಗೂ ಕೆಎ21 ಸಿ6924 ನೊಂದಣಿ ಸಂಖ್ಯೆಯ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳು ಕಂಡು ಬಂದಿದೆ. 

ಈ ಬಗ್ಗೆ ಸದ್ರಿ ಲಾರಿಗಳ ಚಾಲಕರಾದ ಪುತ್ತೂರು, ಕೊಡಿಪಾಡಿ ನಿವಾಸಿ ಮೊಹಮ್ಮದ್ ಇರ್ಪಾನ್ (28) ಹಾಗೂ ಪುತ್ತೂರು ಕಬಕ ನಿವಾಸಿ ನೌಷದ್ (26) ಎಂಬವರುಗಳಲ್ಲಿ ವಿಚಾರಿಸಿದಾಗ, ಸದ್ರಿ ಮರಳನ್ನು ಕಡಬ ತಾಲೂಕು ಅಲಂಕಾರ್ ಎಂಬಲ್ಲಿಂದ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ ಎರಡು  ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳು ಸಾಗಾಟ ಬೇಧಿಸಿದ ವಿಟ್ಲ ಪೊಲೀಸರು : ಇಬ್ಬರು ಚಾಲಕರ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top