ಲ್ಯಾಬ್ ಟೆಕ್ನಿಷಿಯನ್ ನಾಪತ್ತೆ : ಪತ್ತೆಗೆ ಮನವಿ - Karavali Times ಲ್ಯಾಬ್ ಟೆಕ್ನಿಷಿಯನ್ ನಾಪತ್ತೆ : ಪತ್ತೆಗೆ ಮನವಿ - Karavali Times

728x90

7 July 2026

ಲ್ಯಾಬ್ ಟೆಕ್ನಿಷಿಯನ್ ನಾಪತ್ತೆ : ಪತ್ತೆಗೆ ಮನವಿ

ಮಂಗಳೂರು, ಜುಲೈ 07, 2026 (ಕರಾವಳಿ ಟೈಮ್ಸ್) : ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದ ಸ್ನೇಹ (23) ಎಂಬವರು ಜುಲೈ 1 ರಂದು ಕೆಲಸಕ್ಕೆಂದು ಹೋದವರು ಮನೆಗೆ ವಾಪಾಸ್ಸು  ಬಾರದೆ ಕಾಣೆಯಾಗಿದ್ದಾರೆ.  ಈ ಬಗ್ಗೆ ದಕ್ಷಿಣ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ದಪ್ಪ ಶರೀರ ಹೊಂದಿರುವ ಸ್ನೇಹಾ ಕಾಣೆಯಾದ ದಿನ ಗುಲಾಬಿ ಬಣ್ಣದ ಗೆರೆ ಇರುವ ಚೂಡಿದಾರ್ ಟಾಪ್, ಬಿಳಿ ಬಣ್ಣದ ಲೆಗ್ಗಿನ್ ಪ್ಯಾಂಟ್ ಧರಿಸಿದ್ದರು. ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೆÇೀಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಲ್ಯಾಬ್ ಟೆಕ್ನಿಷಿಯನ್ ನಾಪತ್ತೆ : ಪತ್ತೆಗೆ ಮನವಿ Rating: 5 Reviewed By: karavali Times
Scroll to Top