ಫಾಲ್ಸಿಗೆ ತೆರಳಿದ್ದ ಜೋಡಿಯ ಮೇಲೆ ತಂಡದಿಂದ ಅನೈತಿಕ ಪೊಲೀಸ್ ಗಿರಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಫಾಲ್ಸಿಗೆ ತೆರಳಿದ್ದ ಜೋಡಿಯ ಮೇಲೆ ತಂಡದಿಂದ ಅನೈತಿಕ ಪೊಲೀಸ್ ಗಿರಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

14 July 2026

ಫಾಲ್ಸಿಗೆ ತೆರಳಿದ್ದ ಜೋಡಿಯ ಮೇಲೆ ತಂಡದಿಂದ ಅನೈತಿಕ ಪೊಲೀಸ್ ಗಿರಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ, ಜುಲೈ 14, 2026 (ಕರಾವಳಿ ಟೈಮ್ಸ್) : ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್ ಗೆ ತೆರಳಿದ್ದ ಜೋಡಿಯ ಮೇಲೆ ತಂಡವೊಂದು ಅನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ ಘಟನೆ ಜುಲೈ 12 ರಂದು ನಡೆದಿದ್ದು, ಈ ಬಗ್ಗೆ ಯುವತಿ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣದ ದೂರುದಾರ ಯುವತಿಯು ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಜುಲೈ 12 ರಂದು ರಜೆ ಇದ್ದುದರಿಂದ ತನ್ನ ಸ್ನೇಹಿತನೊಂದಿಗೆ ಬೆಳ್ತಂಗಡಿ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್ ಗೆ ತೆರಳಿರುತ್ತಾರೆ. ಈ ವೇಳೆ ಪಾರ್ಕಿಂಗ್ ಬಳಿ ಬಂದಾಗ ಅವರನ್ನು ಸುಮಾರು 5-6 ಜನರ ತಂಡ ಸೇರಿ ಅಡ್ಡಗಟ್ಟಿ, ಯುವತಿ ಅನ್ಯ ಧರ್ಮೀಯ ಯುವಕನೊಂದಿಗೆ ಬಂದಿರುವ ಬಗ್ಗೆ ತಕರಾರು ತೆಗೆದು, ಅವ್ಯಾಚವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2026, ಕಲಂ 126(2), 352, 351(2) ಆರ್/ಡಬ್ಲ್ಯು 3(5) ಬಿ ಎನ್ ಎಸ್-2023 ರಂತೆ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಫಾಲ್ಸಿಗೆ ತೆರಳಿದ್ದ ಜೋಡಿಯ ಮೇಲೆ ತಂಡದಿಂದ ಅನೈತಿಕ ಪೊಲೀಸ್ ಗಿರಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top