ಪುತ್ತೂರಿನಲ್ಲಿ ‘ಚಾಕು’ ಪ್ರಕರಣಕ್ಕೆ ಕೋಮು ಬಣ್ಣ : ಜಿಲ್ಲಾ ಎಸ್ಪಿ ಸ್ಪಷ್ಟನೆ ಹಾಗೂ ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ - Karavali Times ಪುತ್ತೂರಿನಲ್ಲಿ ‘ಚಾಕು’ ಪ್ರಕರಣಕ್ಕೆ ಕೋಮು ಬಣ್ಣ : ಜಿಲ್ಲಾ ಎಸ್ಪಿ ಸ್ಪಷ್ಟನೆ ಹಾಗೂ ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ - Karavali Times

728x90

8 July 2026

ಪುತ್ತೂರಿನಲ್ಲಿ ‘ಚಾಕು’ ಪ್ರಕರಣಕ್ಕೆ ಕೋಮು ಬಣ್ಣ : ಜಿಲ್ಲಾ ಎಸ್ಪಿ ಸ್ಪಷ್ಟನೆ ಹಾಗೂ ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ

 ಪುತ್ತೂರು, ಜುಲೈ 08, 2026 (ಕರಾವಳಿ ಟೈಮ್ಸ್) : ಪುತ್ತೂರು ನಿವಾಸಿ ಯುವತಿಯು ಜುಲೈ 8 ರಂದು ಬೆಳಿಗ್ಗೆ ಸುಮಾರು 6.45ಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ ತನ್ನ ಪರಿಚಯದ ಹಾಗೂ ತನ್ನೊಂದಿಗೆ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದ ಸೊಹೈಲ್ ಎಂಬಾತನು ಚಾಕು ಹಿಡಿದುಕೊಂಡು ನಿಂತಿರುವುದನ್ನು ನೋಡಿರುತ್ತಾಳೆ. ಸದ್ರಿ ಯುವತಿಯು ತನ್ನನ್ನು, ಸೊಹೈಲ್ ಹಾಗೂ  ಆತನೊಂದಿದ್ದ 4 ಜನ ಸ್ನೇಹಿತರು ವಾಹನವೊಂದರಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದಾರೆ ಎಂಬುದಾಗಿ ಭಾವಿಸಿಕೊಂಡು, ಪುತ್ತೂರು ಮಹಿಳಾ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪುತ್ತೂರು ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಯುವಕರನ್ನು ವಿಚಾರಣೆ ನಡೆಸಲಾಗಿ ಅವರುಗಳು ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ ಅದಕ್ಕೆ ಚೀಸ್ ಹರಡಲು ಬೇಕರಿಯಿಂದ ಚಾಕುವನ್ನು ಪಡೆದಿದ್ದು, ಸದ್ರಿ ಚಾಕುವನ್ನು ಬೇಕರಿಗೆ ಹಿಂತಿರುಗಿಸಲು ಹೋಗಿರುವುದಾಗಿ ಹಾಗೂ ತಾವುಗಳು ಯಾವುದೇ ಅಪರಾಧಿಕ ಕೃತ್ಯದಲ್ಲಿ ತೊಡಗಿರುವುದಿಲ್ಲ ಮತ್ತು ಆ ಬಳಿಕ ದೈನಂದಿನಂತೆ ಜಿಮ್ ಗೆ ತೆರಳಿರುವುದಾಗಿ ತಿಳಿಸಿರುತ್ತಾರೆ. ಮುಂದುವರಿದಂತೆ ಈ ಎಲ್ಲಾ ನೈಜ ಸಂಗತಿಗಳು ತಿಳಿದಿದ್ದರೂ ಕೂಡಾ ಧಾರ್ಮಿಕ ಧ್ವೇಷ ಭಾವನೆಯಿಂದ ಸಂಘಟನೆಯೊಂದರಲ್ಲಿ ತೊಡಗಿಸಿಕೊಂಡಿರುವ ಮುರಳಿಕೃಷ್ಣ ಹಂಸತಡ್ಕ ಎಂಬವರು ಹಾಗೂ ಇರರರು ತಮ್ಮ ಮೇಲೆ ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಪ್ರಕರಣ ದಾಖಲಿಸಲು ಯತ್ನಿಸುತ್ತಿರುವುದಾಗಿ ಸದ್ರಿ ಯುವಕರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿರುತ್ತಾರೆ. 

ಸದ್ರಿ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸದ್ರಿ ಘಟನೆಯ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಅವರು ಎಚ್ಚರಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರಿನಲ್ಲಿ ‘ಚಾಕು’ ಪ್ರಕರಣಕ್ಕೆ ಕೋಮು ಬಣ್ಣ : ಜಿಲ್ಲಾ ಎಸ್ಪಿ ಸ್ಪಷ್ಟನೆ ಹಾಗೂ ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ Rating: 5 Reviewed By: karavali Times
Scroll to Top