ಬಂಟ್ವಾಳದಲ್ಲಿ ಮುಂದುವರಿದ ಗಾಳಿ-ಮಳೆ : ಹಲವೆಡೆ ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಮುಂದುವರಿದ ಗಾಳಿ-ಮಳೆ : ಹಲವೆಡೆ ಮನೆಗಳಿಗೆ ಹಾನಿ - Karavali Times

728x90

5 July 2026

ಬಂಟ್ವಾಳದಲ್ಲಿ ಮುಂದುವರಿದ ಗಾಳಿ-ಮಳೆ : ಹಲವೆಡೆ ಮನೆಗಳಿಗೆ ಹಾನಿ

ಬಂಟ್ವಾಳ, ಜುಲೈ 05, 2026 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಮಳೆ ಕಡಿಮೆಯಾದರೂ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ಕಡೇಶ್ವಾಲ್ಯ ಗ್ರಾಮದ ಕೆಮ್ಮಣ್ಣು ನಿವಾಸಿ ಉಸ್ಮಾನ್ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಬಡಗಕಜೆಕಾರು ಗ್ರಾಮದ ಮಡವು ನಿವಾಸಿ ಮೀನಾಕ್ಷಿ ಕೋಂ ಬಾಬು ಪೂಜಾರಿ ಅವರ ಮನೆಗೆ ಗಾಳಿಯಿಂದ ಭಾಗಶಃ ಹಾನಿ ಸಂಭವಿಸಿದೆ. ಶಂಭೂರು ಗ್ರಾಮದ ಕೊಪ್ಪಳ ನಿವಾಸಿ ವಾರಿಜಾಕ್ಷಿ ಕೋಂ ಶೇಖರ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪಂಜಿಕಲ್ಲು ಗ್ರಾಮದ ಏನಿಲಕೋಡಿ ನಿವಾಸಿ ಕಿಶೋರ್ ಅವರ ಮನೆಗೆ ಹಾನಿ ಸಂಭವಿಸಿದೆ. ಪಿಲಿಮೊಗರು ಗ್ರಾಮದ ಕೊಪ್ಪಳ ನಿವಾಸಿ ಚಂದ್ರಹಾಸ ಬಿನ್ ಅಣ್ಣಿ ಪೂಜಾರಿ ಅವರ ಮನೆಗೆ ಗಾಲಿ ಮಳೆಗೆ ಹಾನಿ ಸಂಭವಿಸಿದೆ. ವೀರಕಂಭ ಗ್ರಾಮದ ಬೆಂಞತಿಮಾರು ನಿವಾಸಿ ಶ್ರೀಮತಿ ಸುಬೋಧ ಕೋಂ ಬಾಬು ಶೆಟ್ಟಿ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ವೀರಕಂಭ ಗ್ರಾಮದ ನಿವಾಸಿ ಸದಾಶಿವ ಪೂಜಾರಿ ಬಿನ್ ಅಣ್ಣು ಪೂಜಾರಿ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಗಾಳಿ-ಮಳೆ : ಹಲವೆಡೆ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top