ಬಂಟ್ವಾಳದಲ್ಲಿ ಬಿರುಗಾಳಿ ಬಿರುಸು : ಹಲವು ಗ್ರಾಮಗಳಲ್ಲಿ ಮನೆ ಹಾನಿ ಪ್ರಕರಣಗಳು ವರದಿ - Karavali Times ಬಂಟ್ವಾಳದಲ್ಲಿ ಬಿರುಗಾಳಿ ಬಿರುಸು : ಹಲವು ಗ್ರಾಮಗಳಲ್ಲಿ ಮನೆ ಹಾನಿ ಪ್ರಕರಣಗಳು ವರದಿ - Karavali Times

728x90

7 July 2026

ಬಂಟ್ವಾಳದಲ್ಲಿ ಬಿರುಗಾಳಿ ಬಿರುಸು : ಹಲವು ಗ್ರಾಮಗಳಲ್ಲಿ ಮನೆ ಹಾನಿ ಪ್ರಕರಣಗಳು ವರದಿ

ಬಂಟ್ವಾಳ, ಜುಲೈ 07, 2026 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ನಿರಂತರವಾಗಿ ಬಿರುಸಿನ ಗಾಳಿ ಬೀಸುತ್ತಿದ್ದು, ಪರಿಣಾಮ ಅಲ್ಲಲ್ಲಿ ಹಾನಿಗಳು ಸಂಭವಿಸಿದೆ. ಅಮ್ಮುಂಜೆ ಗ್ರಾಮದ ಮುಡೈಕೋಡಿ ನಿವಾಸಿ ನೆಫಿಸಾ ಕೋಂ ಹಾಮದ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ, ಕುಳ ಗ್ರಾಮದ ಮೋಂಟೆಮಾರು ನಿವಾಸಿ ಶ್ರೀಮತಿ ಗಿರಿಜ ಕೋಂ ಬಾಬು ಗೌಡ ಅವರ ವಾಸ್ತವ್ಯದ ಮನೆಗೆ ತಾಗಿಕೊಂಡಿದ್ದ ಶೀಟ್ ಅಳವಡಿಸಿದ ಉಪಕಟ್ಟಡ ಗಾಳಿ ಮಳೆಗೆ ಹಾನಿಯಾಗಿದೆ. ಕನ್ಯಾನ ಗ್ರಾಮದ ಪನೆಯಡ್ಕ ನಿವಾಸಿ ಹರಿಣಾಕ್ಷಿ ಕೋಂ ಲಕ್ಷ್ಮಣ ಗೌಡ ಎಂಬವರ ವಾಸ್ತವ್ಯದ ಕಚ್ಚಾಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಕೋಡಿ ನಿವಾಸಿ ಸಾವಿತ್ರಿ ಕೋಂ ರವಿ ಅವರ ವಾಸ್ತವ್ಯದ ಮನೆಗೆ  ಹಿಂಬದಿಯ ಬರೆ ಜರಿದು ಮಣ್ಣು ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಇಕ್ಬಾಲ್ ಹಸಿರ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಕರೋಪಾಡಿ ಗ್ರಾಮದ ಕುರೋವುಮೂಲೆ ನಿವಾಸಿ ರಾಮ ನಾಯ್ಕ ಅವರ ವಾಸ್ತವ್ಯದ ಮನೆಗೆ ವಿದ್ಯುತ್ ಕಂಬ ಮುರಿದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಬಿರುಗಾಳಿ ಬಿರುಸು : ಹಲವು ಗ್ರಾಮಗಳಲ್ಲಿ ಮನೆ ಹಾನಿ ಪ್ರಕರಣಗಳು ವರದಿ Rating: 5 Reviewed By: karavali Times
Scroll to Top