ಮಂಗಳೂರು, ಜುಲೈ 16, 2026 (ಕರಾವಳಿ ಟೈಮ್ಸ್) : ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರು ಹಕ್ಕನ್ನು ಚಲಾಯಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತಿ ಸ್ವೀಪ್ ಸಂಯೋಜಕಿ ಸುಮಂಗಲ ನಾಯಕ್ ಹೇಳಿದರು.
ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವಿಶೇಷ ಸಮಗ್ರ ಪರಿಷ್ಕರಣೆ 2026 (ಎಸ್ ಐ ಆರ್) ವಿಶೇಷ ಜಾಗೃತಿ ಅಭಿಯಾನ ಮತ್ತು ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಅರ್ಹ ಮತದಾರರು ಹಿಂದುಳಿಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಯಕ್ಷಗಾನ ಕಲಾವಿದ ಸುರತ್ಕಲ್ ಕರಾವಳಿ ಜಾನಪದ ಕಲಾ ವೇದಿಕೆಯ ಗಿರೀಶ್ ನಾವಡ ಮತ್ತು ಬಳಗ ಇವರು ಎಸ್.ಐ.ಆರ್ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು.
ಬಿ.ಎಲ್.ಒ ಅವರು ಕೊಟ್ಟ ಗಣತಿ ಫಾರ್ಮಿಗೆ ಕಡ್ಡಾಯ ಸಹಿ ಹಾಕಿ ಹಿಂತಿರುಗಿಸಬೇಕು. ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಲು ಸಹಾಯವಾಗಲು ಫಾರಂನಲ್ಲಿ ಬಿ.ಎಲ್.ಒ. ಹೆಸರು ಹಾಗೂ ಮೊಬೈಲ್ ಸಂಖ್ಯೆ ಮುದ್ರಿಸಲಾಗಿದೆ. ಅಲ್ಲದೆ ಸಮಗ್ರವಾಗಿ ಉಚಿತ ಮಾಹಿತಿಗೆ 1950 ಗೆ ಕರೆ ಮಾಡಬಹುದು ಎಂದು ಬೀದಿ ನಾಟಕದಲ್ಲಿ ಸಂದೇಶ ನೀಡಲಾಯಿತು.
ಸ್ವೀಪ್ ಸದಸ್ಯ ಡೊಂಬಯ್ಯ ಇಡ್ಕಿದು, ಕಲಾವಿದರಾದ ವಿಶ್ವನಾಥ ಶೆಟ್ಟಿ, ಮನೋಜ್ ಗಣೇಶಪುರ, ಆಶಾ, ಹನೀಫ್, ವಿಘ್ನೇಶ್ ನಾವಡ ಮೊದಲಾದವರು ಭಾಗವಹಿಸಿದ್ದರು.











0 comments:
Post a Comment