ಐಕಳ ಗ್ರಾಮ ಪಂಚಾಯತಿನ 3 ಹಳ್ಳಿಗಳನ್ನು ತಂಬಾಕು ಮುಕ್ತ ಎಂದು ಘೋಷಣೆ - Karavali Times ಐಕಳ ಗ್ರಾಮ ಪಂಚಾಯತಿನ 3 ಹಳ್ಳಿಗಳನ್ನು ತಂಬಾಕು ಮುಕ್ತ ಎಂದು ಘೋಷಣೆ - Karavali Times

728x90

14 July 2026

ಐಕಳ ಗ್ರಾಮ ಪಂಚಾಯತಿನ 3 ಹಳ್ಳಿಗಳನ್ನು ತಂಬಾಕು ಮುಕ್ತ ಎಂದು ಘೋಷಣೆ

ಮಂಗಳೂರು, ಜುಲೈ 14, 2026 (ಕರಾವಳಿ ಟೈಮ್ಸ್) :  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮುಲ್ಕಿ ತಾಲೂಕು ಪಂಚಾಯತ್ ಮತ್ತು ಐಕಳ ಗ್ರಾಮ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಐಕಳ ಗ್ರಾಮ ಪಂಚಾಯಿತಿಗೆ ಒಳಗೊಂಡಿರುವ ಏಳಂಜೆ, ಉಳೆಪಾಡಿ ಮತ್ತು ಐಕಳ ಹಳ್ಳಿಗಳನ್ನು ತಂಬಾಕು ಮುಕ್ತ ಹಳ್ಳಿಗಳೆಂದು ಘೋಷಿಸಲಾಯಿತು. 

ಮುಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಂ ಎನ್ ಗುರುದತ್ ಅವರು “ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್” ಎಂಬ ನಾಮಫಲಕವನ್ನು ಜುಲೈ 14 ರಂದು ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಾದ ಪುಂಡಲೀಕ ಲಕಾಟಿ, ಶ್ರುತಿ ಜೆ ಸಾಲಿಯಾನ್ ಮತ್ತು ವಿಜಯ ಕುಮಾರ್ ಹಾಗೂ ಐಕಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ್, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಐಕಳ ಗ್ರಾಮ ಪಂಚಾಯತಿನ 3 ಹಳ್ಳಿಗಳನ್ನು ತಂಬಾಕು ಮುಕ್ತ ಎಂದು ಘೋಷಣೆ Rating: 5 Reviewed By: karavali Times
Scroll to Top