ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದ ಸೆನ್ಸಾರ್ ಗೇಟ್ ಹಾನಿಗೈದ ಕಾರು ಚಾಲಕ : ಪ್ರಕರಣ ದಾಖಲು - Karavali Times ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದ ಸೆನ್ಸಾರ್ ಗೇಟ್ ಹಾನಿಗೈದ ಕಾರು ಚಾಲಕ : ಪ್ರಕರಣ ದಾಖಲು - Karavali Times

728x90

8 July 2026

ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದ ಸೆನ್ಸಾರ್ ಗೇಟ್ ಹಾನಿಗೈದ ಕಾರು ಚಾಲಕ : ಪ್ರಕರಣ ದಾಖಲು

ಬಂಟ್ವಾಳ, ಜುಲೈ 08, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಗೇಟಿನಲ್ಲಿ ಟೋಲ್ ಶುಲ್ಕ ಪಾವತಿಸದ ಕಾರು ಚಾಲಕನೋರ್ವ ಸೆನ್ಸಾರ್ ಗೇಟ್ ಹಾನಿಗೊಳಿಸಿದ ಘಟನೆ ಜುಲೈ 6 ರಂದು ರಾತ್ರಿ ವೇಳೆ ನಡೆದಿದೆ. 

ಈ ಬಗ್ಗೆ ಟೋಲ್ ಗೇಟ್ ಸಹಾಯಕ ವ್ಯವಸ್ಥಾಪಕ, ಸುರತ್ಕಲ್-ಮುಕ್ಕ ನಿವಾಸಿ ಯಶವಂತ ಕುಂದರ್ (50) ಅವರು ಪೊಲೀಸರಿಗೆ ದೂರು ನೀಡಿದ್ದು, ಜುಲೈ 6 ರಂದು ರಾತ್ರಿ ಸುಮಾರು 11.47ಕ್ಕೆ ಮಂಗಳೂರಿನಿಂದ ಬಿ ಸಿ ರೋಡು ಕಡೆಗೆ ಕೆಎ19 ಎಂಕ್ಯೂ 1907 ನೋಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ  ಚಲಾಯಿಸಿಕೊಂಡು ಬಂದು ಟೋಲ್ ಹಣದ ಪಾವತಿಯ ಬಗ್ಗೆ ಸೆನ್ಸಾರ್ ಗೇಟ್ ತಡೆ ಉಂಟುಮಾಡಿದ್ದು, ಆ ಸಮಯ ಸದ್ರಿ ಕಾರಿನ ಚಾಲಕ ಕಾರಿನಿಂದಿಳಿದು ಬಂದಾಗ ಹಣ ಪಾವತಿಸಿ ಮುಂದೆ ಹೋಗಿ ಎಂದಾಗ ಪಾವತಿಸದೆ ಸೆನ್ಸಾರ್ ಗೇಟಿನ ಬಳಿ ಹೋಗಿ ಅದನ್ನು ಕೈಯಿಂದ ತುಂಡು ಮಾಡಿ ವಾಹನ ಚಲಾಯಿಸಿ ಮುಂದಕ್ಕೆ ಹೋಗಿರುತ್ತಾನೆ. ಗೇಟ್ ಮುರಿದ ಪರಿಣಾಮ ಸುಮಾರು 6700/- ರೂಪಾಯಿ ನಷ್ಟ ಉಂಟಾಗಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದ ಸೆನ್ಸಾರ್ ಗೇಟ್ ಹಾನಿಗೈದ ಕಾರು ಚಾಲಕ : ಪ್ರಕರಣ ದಾಖಲು Rating: 5 Reviewed By: karavali Times
Scroll to Top