ಮಂಗಳೂರು, ಜುಲೈ 11, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ಆದೇಶದಂತೆ, ಜೂನ್ 21 ರಿಂದ ಜುಲೈ 10ರವರೆಗೆ 2026ರ ಮೇ ತಿಂಗಳವರೆಗೆ, ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ 50% ರಿಯಾಯಿತಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವತಿಯಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ, ಒಟ್ಟು 35,160 ಬಾಕಿ ಇದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 92,43,400/- ರೂಪಾಯಿ ದಂಡದ ಮೊತ್ತವನ್ನು ವಾಹನ ಸವಾರರು/ಚಾಲಕರು ಆನ್ ಲೈನ್ ಮೂಲಕ ಹಾಗೂ ಖುದ್ದಾಗಿ ಪೆÇಲೀಸ್ ಠಾಣೆಗೆ ಬಂದು ಪಾವತಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತಾರೆ.
ಇದರ ಪೈಕಿ ಎ-ಐ ಕ್ಯಾಮೆರಾ ಮೂಲಕ ಸೆರೆ ಹಿಡಿದ ಪ್ರಕರಣಗಳು 18,792, ಅಧಿಕಾರಿ/ ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ಕಂಡು ಬಂದ ನಿಯಮ ಉಲ್ಲಂಘನೆಯ ಕುರಿತು ದಾಖಲಾದ ಪ್ರಕರಣಗಳು 16,368.
224, ವಾಹನ ಚಾಲಕರ ಚಾಲನಾ ಪರವಾನಗಿ (ಡಿ.ಎಲ್.) ಅಮಾನತ್ತಿಗೆ ಕ್ರಮ
ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 2026ನೇ ಸಾಲಿನಲ್ಲಿ ಮಂಗಳೂರು ನಗರ ಪೆÇಲೀಸ್ ವತಿಯಿಂದ ಘೋರ ಅಪಘಾತ ಪ್ರಕರಣಗಳು ಹಾಗೂ ಕೆಲವು ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 224 ವಾಹನ ಚಾಲಕರ ಚಾಲನಾ ಪರವಾನಗಿ (ಡಿ.ಎಲ್.) ಗಳನ್ನು ವಶಪಡಿಸಿಕೊಂಡು, ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್.ಟಿ.ಒ.) ಕಚೇರಿಗಳಿಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಕುರಿತು ಶಿಫಾರಸು ಸಲ್ಲಿಸಲಾಗಿದ್ದು, ಒಟ್ಟು 137 ಡಿ.ಎಲ್ ಗಳು ಅಮಾನತ್ತಾಗಿದ್ದು, ಉಳಿದವುಗಳು ಅಮಾನತ್ತಿನ ಪ್ರಕ್ರಿಯೆಯಲ್ಲಿದೆ.















0 comments:
Post a Comment