ಬಂಟ್ವಾಳ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಆಗಸ್ಟ್ 18 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಮಂಗಳೂರು-ಮೂಡುಶೆಡ್ಡೆ ನಿವಾಸಿ ಮೊಹಮ್ಮದ್ (62) ಎಂದು ಹೆಸರಿಸಲಾಗಿದೆ. ಇವರು ರಸ್ತೆ ದಾಟಿ ಡಿವೈಡರ್ ಬಳಿ ತಲುಪುವಷ್ಟರಲ್ಲಿ ಬಿ ಸಿ ರೋಡು ಕಡೆಯಿಂದ ಸುಬ್ರಮಣ್ಯ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಮೊಹಮ್ಮದ್ ಅವರ ತಲೆ, ಮುಖ, ಎದೆ, ಕಾಲು, ಸೊಂಟ ಮೊದಲಾದೆಡೆ ಗಾಯಗಳಾಗಿವೆ. ತಕ್ಷಣ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಅಥೆನಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment