ಬಂಟ್ವಾಳ, ಆಗಸ್ಟ್ 19, 2026 (ಕರಾವಳಿ ಟೈಮ್ಸ್) : ಬೈಕ್ ಸವಾರನೋರ್ವ ಏಕಾಏಕಿ ಯೂ ಟರ್ನ್ ತೆಗೆದುಕೊಂಡ ಪರಿಣಾಮ ಸ್ಕೂಟರಿಗೆ ಡಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಆಗಸ್ಟ್ 16 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಸ್ಕೂಟರ್ ಸವಾರ ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ನಿವಾಸಿ, ಕೊಣಾಜೆ 7ನೇ ಪಡೆ ಕೆ ಎಸ್ ಆರ್ ಪಿ ಉದ್ಯೋಗಿ ಕಿರಣ್ (47) ಹಾಗೂ ಬೈಕ್ ಸವಾರ ಮಹಮ್ಮದ್ ಅಶ್ರಫ್ ಎಂದು ಹೆಸರಿಸಲಾಗಿದೆ.
ಕಿರಣ್ ಅವರು ಕರ್ತವ್ಯ ಮುಗಿಸಿಕೊಂಡು ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ದಾಸಕೋಡಿ ಎಂಬಲ್ಲಿ ಮುಹಮ್ಮದ್ ಅಶ್ರಫ್ ಅವರು ಯಾವುದೇ ಸೂಚನೆ ನೀಡದೆ ಏಕಾಏಕಿ ಯೂ ಟರ್ನ್ ಪಡೆದುಕೊಂಡ ಪರಿಣಾಮ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಎರಡೂ ದ್ವಿಚಕ್ರ ವಾಹನಗಳ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕಿರಣ್ ಅವರು ಚಿಕಿತ್ಸೆಗಾಗಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾದರೆ, ಅಶ್ರಫ್ ಅವರು ಮತ್ತೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment